1
October, 2026

A News 365Times Venture

1
Thursday
October, 2026

A News 365Times Venture

MDA ಟಾಸ್ಕ್‌ಫೋರ್ಸ್‌ : ಒಂದು ವರ್ಷಕ್ಕೆ ಬರೋಬ್ಬರಿ ₹16.78 ಲಕ್ಷದ ಗುತ್ತಿಗೆ.!

Date:

 

ಮೈಸೂರು, ಅ.೦೧,೨೦೨೬: ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಕಚೇರಿಯಲ್ಲಿ ಕ್ಷಿಪ್ರಕಾರ್ಯಪಡೆ (Task Force) ನಿರ್ವಹಣೆಗೆ ಹೊರಗುತ್ತಿಗೆ ಏಜೆನ್ಸಿ ಮೂಲಕ ಸಿಬ್ಬಂದಿ ಮತ್ತು ವಾಹನ ಒದಗಿಸುವ ಕಾಮಗಾರಿಗೆ ಪ್ರಾಧಿಕಾರದಿಂದ ವರ್ಕ್ ಆರ್ಡರ್ ನೀಡಲಾಗಿದೆ.

2026ರ ಅಕ್ಟೋಬರ್ 1ರಿಂದ 12 ತಿಂಗಳ ಅವಧಿಗೆ ಟಿ.ಎನ್. ಚೇತನ್ ಕುಮಾರ್ ಅವರಿಗೆ ಈ ಕಾಮಗಾರಿ ವಹಿಸಲಾಗಿದ್ದು, ಟೆಂಡರ್ ಮೊತ್ತ ₹16,78,466 ಆಗಿದೆ. ಇದಕ್ಕೆ ಅನ್ವಯವಾಗುವ 18% GST ಪ್ರತ್ಯೇಕವಾಗಿದ್ದು, GST ಸೇರಿದಂತೆ ಮೊತ್ತ ಸುಮಾರು ₹19.81 ಲಕ್ಷ ಆಗುತ್ತದೆ.

1 ಸೆಕ್ಯುರಿಟಿ ಅಧಿಕಾರಿ, 3 ಸಹಾಯಕ ಅಧಿಕಾರಿಗಳು

ಟಾಸ್ಕ್‌ಫೋರ್ಸ್‌ಗಾಗಿ

1 ಸೆಕ್ಯುರಿಟಿ ಆಫೀಸರ್ – ತಿಂಗಳಿಗೆ ₹27,908.76

3 ಅಸಿಸ್ಟ್‌ ಸೆಕ್ಯುರಿಟಿ ಆಫೀಸರ್‌ಗಳು – ತಲಾ ತಿಂಗಳಿಗೆ ₹25,654.47

1 ನಾನ್‌-ಎಸಿ ವಾಹನ – ತಿಂಗಳಿಗೆ ₹35,000

ಒದಗಿಸುವಂತೆ ಸೂಚಿಸಲಾಗಿದೆ. ಸಿಬ್ಬಂದಿಯ ವೇತನದಲ್ಲಿ ಮೂಲ ವೇತನ, VDA, ESI, PF ಹಾಗೂ ಅನ್ವಯವಾಗುವ GST ಸೇರಿದೆ. 2020ರ ನಂತರದ ವಾಹನ ಕಡ್ಡಾಯ

ಟಾಸ್ಕ್‌ಫೋರ್ಸ್‌ಗೆ ಕನಿಷ್ಠ 4+1 ಆಸನಗಳ ಹಾಗೂ 20 ಅಡಿ ಏಣಿ ಅಳವಡಿಸಬಹುದಾದ 2020ರ ನಂತರದ ಬೊಲೆರೋ ಕ್ಯಾಂಪರ್‌, ಟಾಟಾ ಯೋಧಾ ಅಥವಾ ಸಮಾನ ಮಾದರಿಯ ವಾಹನ ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ವಾಹನಕ್ಕೆ ಪ್ರಾಧಿಕಾರ ಸೂಚಿಸುವ ಬಣ್ಣ, ನಾಮಫಲಕ ಹಾಗೂ ಅಗತ್ಯ ಘೋಷಣೆಗಳನ್ನು ಅಳವಡಿಸಬೇಕು.

ಮಳೆಗಾಲ ಅಥವಾ ತುರ್ತು ಸಂದರ್ಭಗಳಲ್ಲಿ ಬಳಸಲು 10 HP ಡೀಸೆಲ್ ಪಂಪ್, 30 ಮೀಟರ್ ಉದ್ದದ 2 ಇಂಚಿನ ಫ್ಲೆಕ್ಸಿಬಲ್ ಡೆಲಿವರಿ ಪೈಪ್ ಹಾಗೂ ಸಕ್ಷನ್ ಪೈಪ್ ಹೊಂದಿರಬೇಕು. ವಾಹನ ಕೆಟ್ಟುಹೋದರೆ ತಕ್ಷಣ ಪರ್ಯಾಯ ವಾಹನ ಒದಗಿಸುವ ಜವಾಬ್ದಾರಿಯೂ ಗುತ್ತಿಗೆದಾರರದ್ದಾಗಿದೆ.

ಸಿಬ್ಬಂದಿಗೆ ಗುರುತಿನ ದಾಖಲೆ ಕಡ್ಡಾಯ:

ಟಾಸ್ಕ್‌ಫೋರ್ಸ್ ಸಿಬ್ಬಂದಿಯ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ದೂರವಾಣಿ ಸಂಖ್ಯೆ ಹಾಗೂ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ಸಿಬ್ಬಂದಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನದೊಂದಿಗೆ EPF, ESI ಹಾಗೂ ಜೀವ ವಿಮೆ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ತಿಂಗಳ 15ರೊಳಗೆ ವೇತನ ಪಾವತಿಸಬೇಕಾಗಿದೆ.

ಬಿಲ್ ಸಲ್ಲಿಕೆಗೆ ಹಲವು ಷರತ್ತು:

ಪ್ರತಿ ತಿಂಗಳ ಬಿಲ್‌ ಜೊತೆಗೆ ಸಿಬ್ಬಂದಿಯ EPF ಮತ್ತು ESI ಪಾವತಿ ರಶೀದಿ, ಹಾಜರಾತಿ ಪಟ್ಟಿ ಹಾಗೂ ಲಾಗ್‌ಬುಕ್‌ನ ದಿನಚರಿ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಗತ್ಯ ತೆರಿಗೆಗಳನ್ನು ಪಾವತಿಸದಿದ್ದರೆ ಬಿಲ್ ತಿರಸ್ಕರಿಸುವುದಾಗಿ ಸೂಚಿಸಲಾಗಿದೆ.

ಪ್ರತಿ ತಿಂಗಳ ಬಿಲ್ ಅನ್ನು 5ನೇ ತಾರೀಖಿನೊಳಗೆ ಸಲ್ಲಿಸಬೇಕು. ಪರಿಶೀಲನೆ ಹಾಗೂ ಅನುಮೋದನೆಯ ಬಳಿಕ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಿಲ್ ಪಾವತಿಸಲಾಗುತ್ತದೆ.

ಸಮವಸ್ತ್ರ, ಹೆಲ್ಮೆಟ್‌, ಬೂಟ್‌ ಕಡ್ಡಾಯ:

ಕರ್ತವ್ಯದಲ್ಲಿರುವ ಸಿಬ್ಬಂದಿ ಪ್ರಾಧಿಕಾರ ಸೂಚಿಸುವ ಸಮವಸ್ತ್ರ, ಹೆಲ್ಮೆಟ್‌, ಬೂಟ್‌ ಹಾಗೂ ರಿಫ್ಲೆಕ್ಟರ್ ಜಾಕೆಟ್‌ ಧರಿಸಬೇಕು. ನಿಗದಿತ ಸಮಯದಲ್ಲಿ ಕಚೇರಿಯಲ್ಲಿ ಹಾಜರಿದ್ದು ಹಾಜರಿ ಪುಸ್ತಕದಲ್ಲಿ ದಾಖಲಿಸಬೇಕು.

ಅಧಿಕಾರಿಗಳಿಂದ ನೀಡುವ ದೂರುಗಳನ್ನು ತಕ್ಷಣ ಸ್ವೀಕರಿಸಿ ಸಮಸ್ಯೆ ಪರಿಹರಿಸಬೇಕು. ನಿರ್ವಹಿಸಿದ ಕೆಲಸಗಳನ್ನು ದಿನಚರಿ ಪುಸ್ತಕದಲ್ಲಿ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ಸಹಿ ಪಡೆಯಬೇಕು.

ಕರ್ತವ್ಯ ಲೋಪಕ್ಕೆ ದಂಡ:

ಸಿಬ್ಬಂದಿ ಕರ್ತವ್ಯದ ವೇಳೆ ದುರ್ನಡತೆ ತೋರಿದರೆ, ಮದ್ಯಪಾನ ಮಾಡಿರುವುದು ಕಂಡುಬಂದರೆ, ಸಮವಸ್ತ್ರ ಧರಿಸದಿದ್ದರೆ ಅಥವಾ ಯಾವುದೇ ತೊಂದರೆ ಉಂಟುಮಾಡಿದರೆ ಒಂದು ಗಂಟೆಯೊಳಗೆ ಪರ್ಯಾಯ ಸಿಬ್ಬಂದಿ ಒದಗಿಸಬೇಕು.

ತಪ್ಪಿದಲ್ಲಿ ಗುತ್ತಿಗೆದಾರರಿಗೆ ದಿನಕ್ಕೆ ₹1,000 ದಂಡ ವಿಧಿಸಿ, ಆ ದಿನದ ವೇತನವನ್ನು ಬಿಲ್‌ನಿಂದ ಕಡಿತಗೊಳಿಸುವ ಷರತ್ತು ಇದೆ.

ಉಪಗುತ್ತಿಗೆಗೆ ಅವಕಾಶವಿಲ್ಲ:

ಗುತ್ತಿಗೆದಾರರು ಕಾಮಗಾರಿಯನ್ನು ತಮ್ಮ ಸ್ವಂತ ಹೆಸರಿನಲ್ಲಿಯೇ ನಿರ್ವಹಿಸಬೇಕು. ಸಬ್‌-ಕಾಂಟ್ರಾಕ್ಟ್‌ಗೆ ಅವಕಾಶವಿಲ್ಲ. ಷರತ್ತು ಉಲ್ಲಂಘನೆಯಾದರೆ ಟೆಂಡರ್ ರದ್ದುಪಡಿಸಿ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು MDA ಕಾಯ್ದಿರಿಸಿದೆ.

365 ದಿನವೂ ಸೇವೆ:

ವರ್ಷದ 365 ದಿನಗಳಲ್ಲೂ ಟೆಂಡರ್‌ನಲ್ಲಿ ಸೂಚಿಸಿರುವ ಕೆಲಸಗಳನ್ನು ನಿರ್ವಹಿಸಬೇಕು. ಅಪಘಾತ, ಅಂಗವಿಕಲತೆ, ಮರಣ ಅಥವಾ ನ್ಯಾಯಾಲಯದ ವ್ಯಾಜ್ಯ ಸೇರಿದಂತೆ ಸಿಬ್ಬಂದಿಗೆ ಸಂಬಂಧಿಸಿದ ಯಾವುದೇ ಅನಿರೀಕ್ಷಿತ ಘಟನೆಗಳಿಗೆ ಪ್ರಾಧಿಕಾರ ಜವಾಬ್ದಾರಿಯಾಗಿರುವುದಿಲ್ಲ ಎಂದು ಷರತ್ತುಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಗುತ್ತಿಗೆ ಅವಧಿಯಲ್ಲಿ ಹೆಚ್ಚುವರಿ ದರ ಕೇಳುವಂತಿಲ್ಲ. ವಾಹನಗಳನ್ನು ಪ್ರಾಧಿಕಾರವೇ ಖರೀದಿಸಿ ನಿರ್ವಹಿಸುವ ಕಾಮಗಾರಿಗೆ ಸರ್ಕಾರದ ಅನುಮೋದನೆ ದೊರೆತರೂ ಗುತ್ತಿಗೆ ಅವಧಿಯನ್ನು ಮುಕ್ತಾಯಗೊಳಿಸುವ ಅವಕಾಶವಿದೆ. ಗುತ್ತಿಗೆಯನ್ನು ಕಾರಣ ನೀಡದೇ ರದ್ದುಗೊಳಿಸುವ ಅಧಿಕಾರವೂ ಪ್ರಾಧಿಕಾರಕ್ಕೆ ಇದೆ.

ದೂರು ಬಂದರೆ ಗುತ್ತಿಗೆ ರದ್ದು, ಕಪ್ಪುಪಟ್ಟಿಗೆ:

ಟಾಸ್ಕ್‌ಫೋರ್ಸ್ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಪದೇಪದೇ ದೂರುಗಳು ಬಂದರೆ ಮುನ್ನೆಚ್ಚರಿಕೆ ನೀಡದೇ ಗುತ್ತಿಗೆ ರದ್ದುಪಡಿಸುವುದರ ಜೊತೆಗೆ ಭದ್ರತಾ ಠೇವಣಿ ಹಾಗೂ ಕಾರ್ಯಾಧಾರಿತ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಷರತ್ತು ಕೂಡ ಇದೆ.

ಪ್ರಾಧಿಕಾರದ ಆಸ್ತಿಗೆ ಹಾನಿ ಉಂಟಾದರೆ ಆಯುಕ್ತರು ನಿಗದಿಪಡಿಸುವ ಪರಿಹಾರ ಮೊತ್ತವನ್ನು ಪಾವತಿಸಬೇಕು. ಪಾವತಿಸದಿದ್ದರೆ ಗುತ್ತಿಗೆ ಬಿಲ್‌ನಿಂದ ಆ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ವರ್ಕ್ ಆರ್ಡರ್ ದಿನಾಂಕ: 01-10-2026

ಗುತ್ತಿಗೆ ಅವಧಿ: 12 ತಿಂಗಳು

ಟೆಂಡರ್ ಮೊತ್ತ: ₹16,78,466 + 18% GST

ಅಂದಾಜು ವೆಚ್ಚ: ₹17 ಲಕ್ಷ

ಟಾಸ್ಕ್‌ಫೋರ್ಸ್: 1 ಸೆಕ್ಯುರಿಟಿ ಆಫೀಸರ್ + 3 ಅಸಿಸ್ಟ್‌ ಸೆಕ್ಯುರಿಟಿ ಆಫೀಸರ್ + 1 ವಾಹನ

KEY WORDS:

Mysuru Development Authority, MDA, Mysuru, MDA Task Force, MDA work order, T.N. Chetan Kumar, Outsourcing agency, tender, Task Force staff and vehicle ₹16.78 lakh,

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತುಮಕೂರಿನಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಗೆ ರೆನೈಸಾನ್ಸ್ ಆಸಕ್ತಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಅಕ್ಟೋಬರ್‌,1,2026 (www.justkannada.in)  2025ರಲ್ಲಿ ನಡೆದಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಘೋಷಿಸಿದ್ದಂತೆ ಭಾರತ-ಅಮೆರಿಕ...

AIISHನಲ್ಲಿ 2024ರಲ್ಲಿ ಪ್ರಕಟಿಸಿದ್ದ ಬೋಧಕ ಹುದ್ದೆಗಳ ನೇಮಕಾತಿ ಜಾಹೀರಾತು ರದ್ದು

  ಮೈಸೂರು, ಅ.01, 2026: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ...

ಮತದಾರರ ಪಟ್ಟಿಯಿಂದ ಅಳಿಸುವ ಷಡ್ಯಂತ್ರ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಿ- ಸಿಎಂ ಡಿಕೆಶಿ ಆಗ್ರಹ

ಬೆಂಗಳೂರು, ಅಕ್ಟೋಬರ್‌,1,2026 (www.justkannada.in):  “ಪೂರ್ವಮುದ್ರಿತ ಮತದಾರರ ವಿವರಗಳನ್ನು ಒಳಗೊಂಡ ಫಾರಂ -7...

ಮೈಸೂರಿನಲ್ಲಿ ವಿಶ್ವದ ಮೊದಲ ಸ್ವತಂತ್ರ 8K LED ಡೋಮ್ ಪ್ಲಾನೆಟೇರಿಯಂ – COSMOS

  ಮೈಸೂರು, ಅ.01,2026: ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ಜನಸಾಮಾನ್ಯರು, ವಿದ್ಯಾರ್ಥಿಗಳು...