10
July, 2025

A News 365Times Venture

10
Thursday
July, 2025

A News 365Times Venture

MYSORE CRIME NEWS: ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್ , ಪೊಲೀಸರಿಗೆ ಮುಖಭಂಗ

Date:

 

ಮೈಸೂರು, ಮಾ.11,2025 : ಇಲ್ಲಿನ ಉದಯಗಿರಿ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದ  ಆರೋಪಿ ಸತೀಶ್ ಗಡಿಪಾರು ಆದೇಶಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ಕೋರಿ ಪೊಲೀಸರು ಸಲ್ಲಿಸಿದ್ದ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿದೆ.

ಗಡಿಪಾರು ನೋಟಿಸ್ ನೀಡುವಾಗ ಪೊಲೀಸರ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶವನ್ನು ಉಲ್ಲೇಖಿಸಿ ಕೋರ್ಟ್, ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿತು.

ಘಟನೆ ಹಿನ್ನೆಲೆ:

ವಿವಾದತ್ಮಕ ಪೋಸ್ಟ್ ನಿಂದ ಗಲಭೆಗೆ ಕಾರಣವಾದ ಆರೋಪ ಎದುರಿಸುತ್ತಿರುವ ಸತೀಶ್  ಅಲಿಯಾಸ್ ಪಾಂಡುರಂಗ ನ್ನನು ಗಡಿಪಾರು ಮಾಡುವ ಸಲುವಾಗಿ ಪೊಲೀಸರು ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಪೊಲೀಸರು ಕಳೆದವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಆರೋಪಿ ಪರ ವಕೀಲ ಅ.ಮ.ಭಾಸ್ಕರ್ , ತಡೆಯಾಜ್ಞೆ ತೆರವಿಗೆ ಆಕ್ಷೇಪಿಸಿದರು. ಆರೋಪಿ ಸತೀಶ್ ವಿರುದ್ಧ ಪೊಲೀಸರು ಹೊರಡಿಸಿರುವ ಗಡಿಪಾರು ಆದೇಶ ಕಾನೂನು ಬಾಹಿರ ಎಂಬುದನ್ನು ಪುನರುಚ್ಚರಿಸಿದರು. ಈ ಆದೇಶ ಹೊರಡಿಸುವ ಮುನ್ನ ಯಾವುದೇ ನಿಯಮವನ್ನು ಪಾಲಿಸಿಲ್ಲ. ಆರೋಪಿಯ ಆರೋಪದ ಬಗ್ಗೆ ಉಲ್ಲೇಖವಿಲ್ಲ, ತನಿಖಾ ವರದಿ ಸಹ ಇಲ್ಲ. ಜತೆಗೆ ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಸಹ ಇಲ್ಲ. ಇಷ್ಟಾದರೂ ಯಾವ ಕಾರಣಕ್ಕಾಗಿ ಗಡಿಪಾರು ನೋಟಿಸ್ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪಟ್ಟು ಹಿಡಿದರು.ಪ್ರಕರಣದ ವಿಚಾರಣೆ ಆಲಿಸಿದ ನ್ಯಾಯಾಧೀಶರು, ಮಾ. 15 ಕ್ಕೆ ತೀರ್ಪು ಕಾಯ್ದಿರಿಸಿ ಮುಂದೂಡಿದ್ದರು.

ಇಂದು ಪ್ರಕರಣದ ವಿಚಾರಣೆ ನಡಿಸಿದ ನ್ಯಾಯಾಧೀಶರು, ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ವಜಾಗೊಳಿಸಿ ಆದೇಶಿಸಿತು.

key words: Mysore Court, dismisses ,deportation notice, A blow to the police, udayagiri police,

summary :

Court dismisses deportation notice: A blow to the police

The court, hearing the application filed by the police seeking the lifting of the stay order issued by the court on the deportation order of accused Satish in a case registered under the jurisdiction of the Udayagiri police station here, has dismissed the deportation notice issued by the police.

The post MYSORE CRIME NEWS: ಗಡಿಪಾರು ನೋಟಿಸ್ ವಜಾಗೊಳಿಸಿದ ಕೋರ್ಟ್ , ಪೊಲೀಸರಿಗೆ ಮುಖಭಂಗ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ...

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು,ಜುಲೈ,10,2025 (www.justkannada.in):  ಮುಡಾದಲ್ಲಿ ಅಕ್ರಮ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ...

ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ  ಆಸ್ತಿ ಕಬಳಿಸಲು ಸಂಚು...

ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು,ಜುಲೈ,10,2025 (www.justkannada.in):  ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ...