ಬೆಂಗಳೂರು, ಜೂನ್,4,2025 (www.justkannada.in): ಐಪಿಎಲ್ ಟ್ರೋಫಿಗೆದ್ದು ಬೆಂಗಳೂರಿನಲ್ಲಿ ಸಂಭ್ರಮಿಸಲು ಆರ್ ಸಿಬಿ ಆಗಮಿಸುತ್ತಿದ್ದು ಈ ಮಧ್ಯೆ ಆಟಗಾರರಿಗೆ ಸನ್ಮಾನ ಮಾಡಲು ಸರ್ಕಾರ ಮುಂದಾಗಿದೆ.
ಈ ನಡುವೆ ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೇಲೆ ವೇದಿಕೆ ಸಿದ್ದವಾಗಿದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, RCB ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸನ್ಮಾನ ಮಾಡಲಾಗುವುದು. ಆದರೆ ಭದ್ರತಾ ದೃಷ್ಠಿಯಿಂದ ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಇಲ್ಲ ಎಂದಿದ್ದಾರೆ.
ಆರ್ ಸಿಬಿ ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ ನಂತರ ಎಲ್ಲಾ ಆಟಗಾರರು ಬಸ್ ನಲ್ಲೇ ಪ್ರಯಾಣಿಸಲಿದ್ದಾರೆ. ವಿಧಾನಸೌಧದಿಂದ ಬಸ್ ನಲ್ಲಿ ಸ್ಟೇಡಿಯಂಗೆ ತೆರಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
Key words: RCB, players, felicitate, Home Minister, Parameshwar
The post RCB ಆಟಗಾರರಿಗೆ ಸನ್ಮಾನ: ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.