ಬೆಂಗಳೂರು,ಜುಲೈ,10,2026 (www.justkannada.in): ಸಿಎಂ ಡಿಕೆ ಶಿವಕುಮಾರ್ ಪ್ರವಾಸ ಕೈಗೊಂಡಿರುವುದು, ವಿಭಾಗವಾರು ಸಭೆ ಮಾಡುತ್ತಿರುವುದು ಎಸ್ ಐಆರ್ ದುರುಪಯೋಗ ಮಾಡಿಕೊಳ್ಳಲು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸಿಎಂ ಡಿಕೆ ಶಿವಕುಮಾರ್ ವಿಭಾಗವಾರು ಸಭೆ ಮಾಡುತ್ತಿರುವುದು ಬರ ಅಭಿವೃದ್ದಿಗೆ ಅಲ್ಲ ಎಸ್ ಐಆರ್ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು. ಎಸ್ ಐಆರ್ ದುರುಪಯೋಗ ಮಾಡಿಕೊಳ್ಳೋಕೆ ಸಿಎಂ ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಗೆ ಹಿರಿಯೂರು ಕ್ಷೇತ್ರ ಬಿಟ್ಟುಕೊಡುವಂತೆ ಬಿವೈ ವಿಜಯೇಂದ್ರಗೆ ತಿಳಿಸಿದ್ದೇನೆ. ಜಿಬಿಎ ಚುನಾವಣೆ ನಡೆಸುವುದಕ್ಕೆ ಕಾಂಗ್ರೆಸ್ ಗೆ ಭಯ ಇದೆ. ಅದಕ್ಕಾಗಿ ಚುನಾವಣೆ ಮುಂದೂಡುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ 1 ವಾರದ ಹಿಂದೆಯೇ ನನಗೆ ಮಾಹಿತಿ ಬಂತು ಎಂದರು. 
ಶಾಶ್ವತ ಪ್ರಮಾಣ ಪತ್ರ ನೀಡಲು ಸರ್ಕಾರ ಮುಂದಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿಕೆ, ಶಾಶ್ವತ ನಿವಾಸ ಪ್ರಮಾಣ ಪತ್ರ ವಿಚಾರದಲ್ಲಿ ಬಿಜೆಪಿ ಹೇಳಿಕೆಗೆ ಸಹಮತವಿದೆ ಎಂದರು.
Key words: CM DK Shivakumar, SIR, misuse, Union Minister, HDK
The post SIR ದುರುಪಯೋಗಕ್ಕಾಗಿ ಸಿಎಂ ಡಿಕೆಶಿ ಪ್ರವಾಸ, ವಿಭಾಗವಾರು ಸಭೆ – ಕೇಂದ್ರ ಸಚಿವ HDK ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




