29
April, 2026

A News 365Times Venture

29
Wednesday
April, 2026

A News 365Times Venture

SSLC ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಡಾ: ಪುಷ್ಪ ಅಮರನಾಥ್ ಅಭಿನಂದನೆ

Date:

ಮೈಸೂರು, ಏಪ್ರಿಲ್,29,2026 (www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಕುಮಾರಿ ಮಾಧುರಿ ಅವರ ಮನೆಗೆ ಮಂಗಳವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಮಾಧುರಿ ಅವರ ತಾಯಿ ಸರಿತಾ ಅವರು ಗೃಹಲಕ್ಷ್ಮಿ  ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಬೇಕಿರುವ ಪೂರಕ ಸಾಮಗ್ರಿಗಳನ್ನು ಖರೀದಿಸಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಡಾ.ಪುಷ್ಪಾ ಅಮರನಾಥ್,  ಗ್ಯಾರಂಟಿ ಯೋಜನೆಗಳು  ಜನಸಾಮಾನ್ಯರ ಬದುಕಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದಲಾವಣೆಯ ಬೆಳಕಾಗಿದೆ. ಇದಕ್ಕೆ ಅನೇಕ ಫಲಶೃತಿಗಳು ನಮ್ಮ ಕಣ್ಮುಂದೆ ಇವೆ. ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಗೃಹಲಕ್ಷ್ಮಿ ಯೋಜನೆಯ ಹಣದ ಸಹಾಯದಿಂದ ಮಾಧುರಿ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ 2ನೇ ಸ್ಥಾನ ಪಡೆದಿರುವುದು ಎಂದರು

ಈಕೆಯಂತೆ ಅನೇಕ ಮಕ್ಕಳ ಬದುಕಿನಲ್ಲಿ ಗ್ಯಾರಂಟಿ ಯೋಜನೆಗಳು ಬೆಳಕಾಗಿದೆ. ಕೆಲವು ಮಾತ್ರ ಎಲ್ಲರ ಕಣ್ಣಿಗೆ ಕಂಡರೆ, ಅನೇಕ ಫಲಾನುಭವಿಗಳ ಕಥೆ ಎಲೆಮರೆಯಾಗಿಯೇ ಉಳಿಯುತ್ತವೆ. ಇಂತಹ ಫಲಶೃತಿಗಳು ಕಣ್ಣಮುಂದೆ ಬಂದಾಗೆಲ್ಲ, ಸರ್ಕಾರಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ ಎಂದರು.

ಇಂತಹ ಯೋಜನೆ ರೂಪಿಸುವಲ್ಲಿ  ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಶ್ರಮ ಅಪಾರವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅರುಣ್ ಕುಮಾರ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: Dr. Pushpa Amarnath, congratulates, SSLC 2nd Rank,  student, Mysore

The post SSLC ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಡಾ: ಪುಷ್ಪ ಅಮರನಾಥ್ ಅಭಿನಂದನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ಅನುಮಾನಾಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ.

ಮೈಸೂರು, ಏಪ್ರಿಲ್, 29,2026 (www.justkannada.in):  ಅಬಕಾರಿ ಇಲಾಖೆಯ ವತಿಯಿಂದ ಮೈಸೂರು ನಗರ...

ವೈದ್ಯರ ಸಲಹಾ ಚೀಟಿ ಇಲ್ಲದೆ ಎಚ್, ಎಚ್ 1ಮತ್ತು ಎಕ್ಸ್ ಅಡಿ ಬರುವ ಔಷಧಿ ಮಾರಾಟ ಕಂಡು ಬಂದರೆ ಕ್ರಮ: ಡಿಸಿ ಲಕ್ಷ್ಮಿಕಾಂತ ರೆಡ್ಡಿ

ಮೈಸೂರು, ಏಪ್ರಿಲ್,29,2026 (www.justkannada.in):  ಔಷಧ ಮಾರಾಟ ಅಂಗಡಿಗಳು ಔಷಧ ಮತ್ತು ಕಾಂತಿವರ್ಧಕ...

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು,ಏಪ್ರಿಲ್,29,2026 (www.justkannada.in):  ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ...

ಖರ್ಗೆ ಸಿಎಂ ಆದ್ರೆ ಸ್ವಾಗತ ಎಂಬ ಹೇಳಿಕೆ: MLC ಯತೀಂದ್ರ ಪ್ರತಿಕ್ರಿಯಿಸಿದ್ದು ಹೀಗೆ?

ರಾಯಚೂರು,ಏಪ್ರಿಲ್,29,2026 (www.justkannada.in):  ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಸಂತೋಷ ಸ್ವಾಗತಿಸುತ್ತೇವೆ ಎಂಬ...