25
April, 2026

A News 365Times Venture

25
Saturday
April, 2026

A News 365Times Venture

ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮಾನ- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ

Date:

ಬೆಂಗಳೂರು,ಏಪ್ರಿಲ್,25,2026 (www.justkannada.in): ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,   ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರ ಹಿಂದೂಧರ್ಮವನ್ನು ಅಪಮಾನಿಸುವ ಕೆಲಸ ಮಾಡುತ್ತಿದೆ ಕಳೆದ ವರ್ಷ ಕೂಡ ಸಿಇಟಿ ವೇಳೆ ಇದೇ ರೀತಿ ಘಟನೆ ಆಗಿತ್ತು ಆಗಲೂ ತಿಲಕ, ಮಾಂಗಲ್ಯ ಸರ, ಜನಿವಾರ ತೆಗೆಸಿದ್ದರು. ಈಗಲೂ ಜನಿವಾರ ತೆಗೆಸಿ  ಮತ್ತೆ ಅಪಮಾನ ಮಾಡಿದ್ದಾರೆ.  ಕಾಂಗ್ರೆಸ್ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಅಲ್ಪಸಂಖ್ತಾತರ ಒಲೈಕೆ ಮಾಡಲು ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ಹರಿಹಾಯ್ದರು.

ದೇಶದ ಮಹಿಳೆಯರು ಇಂಡಿಯಾ ಒಕ್ಕೂಟವನ್ನ ಸುಮ್ಮನೆ ಬಿಡಲ್ಲ  

ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಣಾ ಮಸೂದೆಗೆ ಸೋಲು ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದಕ್ಷಿಣ ಭಾರತ ಜನಸಂಖ್ಯೆ ಕಡಿಮೆ ಆಗಿ ಕಡಿಮೆ ಸೀಟ್ ಬಂದರೆ ಉತ್ತರ ಭಾರತವು ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿತು ಎಂದು ಇಂಡಿಯಾ ಒಕ್ಕೂಟ ದಂಗೆ ಎಬ್ಬಿಸುವ ಷಡ್ಯಂತ್ರ ಮಾಡುತ್ತಿದೆ. ಕ್ಷೇತ್ರ ಮರುವಿಂಗಡಣೆಯಿಂದ ರಾಜ್ಯದಲ್ಲಿ ಲೋಕಸಭೆ ಕ್ಷೇತ್ರ ಹೆಚ್ಚಳವಾಗಲಿದೆ.   42ಕ್ಕೆ ಏರಿಕೆಯಾಗುತ್ತೆ ತಮಿಳುನಾಡಿನಲ್ಲಿ 59ಕ್ಕೆ ಹೆಚ್ಚಾಗುತ್ತೆ ಇದರಿಂದ ದಕ್ಷಿಣ ಭಾರತಕ್ಕೆ ಲಾಭ ಇದೆ. ಆದರೆ ಇಂಡಿಯಾ ಒಕ್ಕೂಟ ಈ ಮಸೂದೆಯನ್ನ ಸೋಲಿಸಿದೆ. ಈ ಮಸೂದೆ ಬರುವ ದಿನಗಳಲ್ಲಿ ಪಾಸ್ ಆಗುತ್ತದೆ ಎಂಬ ವಿಶ್ವಾಸವಿದೆ. ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಅವಳ ಕೈಯಲ್ಲಿ ಬರೀ ಸೌಟು ಇಲ್ಲ ಆಯುಧವೂ ಇದೆ ಕಂಪ್ಯೂಟರ್ ಕೂಡ ಇದೆ. ದೇಶದ ಮಹಿಳೆಯರು ಇಂಡಿಯಾ ಒಕ್ಕೂಟವನ್ನ ಸುಮ್ಮನೆ ಬಿಡಲ್ಲ  ಎಂದರು.

Key words: Congress, insults, Hindus, Union Minister, Shobha Karandhlaje

The post ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮಾನ- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ – ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಏಪ್ರಿಲ್,25,2026 (www.justkannada.in):  ರಾಜ್ಯದಲ್ಲಿ ಬಿಸಿ ತಾಪ, ಕುಡಿಯುವ ನೀರಿಗೆ ಸಮಸ್ಯೆ ವಿಚಾರಕ್ಕೆ...

ನಾಯಕತ್ವ ಬದಲಾವಣೆ ವಿಚಾರ: ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ-ಶಾಸಕ ರಂಗನಾಥ್

ತುಮಕೂರು,ಏಪ್ರಿಲ್,25,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಹೈಕಮಾಂಡ್ ಸದ್ಯದಲ್ಲೇ...

ನಟ ಡಾ.ರಾಜ್ ಬಗ್ಗೆ ಅವನಿಗೇನು ಗೊತ್ತು: ಚೇತನ್ ಗಡಿಪಾರು ಮಾಡಿ- ಸಾ.ರಾ ಗೋವಿಂದು ಕಿಡಿ

ಬೆಂಗಳೂರು,ಏಪ್ರಿಲ್,25,2026 (www.justkannada.in):  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸಮಾಧಿಗೆ 2.5...

ಕಿಮ್ಸ್ ಆಸ್ಪತ್ರೆಗೆ ಭೇಟಿ: ಸಚಿವ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,25,2026 (www.justkannada.in):  ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,...