4
May, 2026

A News 365Times Venture

4
Monday
May, 2026

A News 365Times Venture

ಇರಾನ್ ಮೇಲೆ ಅಮೇರಿಕ, ಇಸ್ರೇಲ್ ಜಂಟಿ ದಾಳಿ.

Date:

ಟೆಹರಾನ್​, ಫೆಬ್ರವರಿ,28,2026 (www.justkannada.in):  ಇರಾನ್​​ ಮತ್ತು ಇಸ್ರೇಲ್​​ ನಡುವೆ ಯುದ್ಧದ ಕಾರ್ಮೋಡ ಹೆಚ್ಚಿದ್ದು, ಇರಾನ್‌ ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನ ಗುರಿಯಾಗಿಸಿ ಇಸ್ರೇಲ್ ಅಮೇರಿಕಾ ಜಂಟಿಯಾಗಿ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ.

ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ಇಸ್ರೇಲ್​​ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಟೆಹರಾನ್​ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿವೆ. ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್ ಜನತೆ ತತ್ತರಿಸಿದ್ದಾರೆ.

ಇರಾನ್​ ಸೇನೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.ಇರಾನ್​​ ಮೇಲಿನ ದಾಳಿ ಬೆನ್ನಲ್ಲೇ ಇಸ್ರೇಲ್​​ ದೇಶಾದ್ಯಂತ ತುರ್ತು ಪರಿಸ್ಥಿತಿ ​​​​ಘೋಷಣೆ ಮಾಡಲಾಗಿದ್ದು, ತುರ್ತುಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಅಪರೇಷನ್ ಶೀಲ್ಟ್ ಆಫ್ ಜುದಾ ಹೆಸರಲ್ಲಿ ಇರಾನ್ ಮತ್ತು ಅಮೇರಿಕಾ ದಾಳಿ ನಡೆಸಿವೆ ಎನ್ನಲಾಗಿದೆ.

Key words: Israel, missile ,attack , Iran

The post ಇರಾನ್ ಮೇಲೆ ಅಮೇರಿಕ, ಇಸ್ರೇಲ್ ಜಂಟಿ ದಾಳಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...