ಚಾಮರಾಜನಗರ,ಆಗಸ್ಟ್,7,2026 (www.justkannada.in): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಸ್ಥಾನ ಕೈತಪ್ಪಿದ ಶಾಸಕರ ತೀವ್ರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಸಚಿವ ಪುಟ್ಟರಂಗಶೆಟ್ಟಿ, ರಾಜಕೀಯದಲ್ಲಿ ಮುನಿಸು ಎಂಬುದು ಸಹಜ. ಎರಡು ದಿನ ಕಳೆದರೆ ಎಲ್ಲರೂ ಸುಮ್ಮನಾಗುತ್ತಾರೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಹೆಚ್ಚಿನ ಅನುದಾನ ನೀಡಿದ್ದಾರೆ. ಇಲ್ಲಿ ಪಕ್ಷ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ ಎಂದರು.
ಸಚಿವ ಸ್ಥಾನ ಕೈತಪ್ಪಿದಕ್ಕೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪುಟ್ಟರಂಗಶೆಟ್ಟಿ, ನನಗೂ ಸ್ಥಾನ ಸಿಗದಿದ್ದರೆ ಮುನಿಸಿಕೊಳ್ಳುತ್ತಿದ್ದೆ. ಬಳಿಕ ಸುಮ್ಮನಾಗುತ್ತಿದ್ದೆ. ಇದೇ ರೀತಿ ಇತರರು 2 ದಿನ ಬಿಟ್ಟು ಎಲ್ಲರೂ ಸುಮ್ಮನಾಗುತ್ತಾರೆ ಒಳ್ಳೆಯದ್ದು, ಕೆಟ್ಟದ್ದು ಇದ್ದೇ ಇರುತ್ತದೆ ಎಂದರು.
Key words: Cabinet expansion, Minister, Puttarangashetty
The post ಎರಡು ದಿನ ಕಳೆದ್ರೆ ಎಲ್ಲರೂ ಸುಮ್ಮನಾಗ್ತಾರೆ- ಸಚಿವ ಪುಟ್ಟರಂಗಶೆಟ್ಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




