17
February, 2026

A News 365Times Venture

17
Tuesday
February, 2026

A News 365Times Venture

ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಎಂ.ಲಕ್ಷ್ಮಣ್

Date:

ಮೈಸೂರು,ಆಗಸ್ಟ್,6,2025 (www.justkannada.in):  ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂ.ಲಕ್ಷ್ಮಣ್, ಸಚಿವ ಮಹದೇವಪ್ಪ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ. ಮಹದೇವಪ್ಪ ಹೇಳಿದ್ದು ನೂರಕ್ಕೆ ನೂರು ಸತ್ಯ. ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದಕ್ಕೆ ಮೊದಲು ಅದೇ ಜಾಗದಲ್ಲಿ ಬ್ಯಾರೇಜ್ ಕಟ್ಟಿದ್ದು ಟಿಪ್ಪು. ಮೋವಿ ಡ್ಯಾಂ ಅಂತಾ ಹೆಸರಿಟ್ಟು 6 ಟಿಎಂಸಿ ನೀರು ಸಂಗ್ರಹಣದ ಬ್ಯಾರೇಜ್ ಅನ್ನು ಟಿಪ್ಪು ಕಟ್ಟಿದ್ದರು. ಶ್ರೀರಂಗಪಟ್ಟಣ, ಕೆ.ಆರ್. ನಗರ ಭಾಗಕ್ಕೆ ಇದರಿಂದ ನೀರು ಹರಿಸುತ್ತಿದ್ದರು. ನಂತರ ಇದೇ ಜಾಗದಲ್ಲೆ ಕೆಆರ್ ಎಸ್ ಅಣೆಕಟ್ಟು ಕಟ್ಟಲಾಗಿದೆ. ಇದಕ್ಕೆ ಶಾಸನದ ಸಾಕ್ಷಿ ಇದೆ ನಾಲ್ವಡಿಗೂ ಹಾಲಿ ಸಂಸದರಿಗೆ ಹೋಲಿಕೆ ಬೇಡ.‌ ಇವರು ರಾಜಕಾರಣಕ್ಕಾಗಿ ಬಂದವರು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್  ಗಿಂತ ನಮ್ಮ ತಂದೆ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಸಿಎಂ ಪುತ್ರ ಡಾ.ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಎಂ.‌ ಲಕ್ಷ್ಮಣ್ , ಸಿದ್ದರಾಮಯ್ಯ ಮೈಸೂರಿಗೆ ನೀರು ಕೊಟ್ಟಿದ್ದಾರೆ. ‌ಆಸ್ಪತ್ರೆ ಕಟ್ಟಿಸಿದ್ದಾರೆ. ರಸ್ತೆ ಮಾಡಿಸಿದ್ದಾರೆ. ರಾಜ ಪ್ರಭುತ್ವದಲ್ಲಿ ನಾಲ್ವಡಿ ಅವರು ಕೆಲಸ ಮಾಡಿದರು. ಪ್ರಜಾಪ್ರಭುತ್ವದಲ್ಲಿ  ಸಿದ್ದರಾಮಯ್ಯ ಮೈಸೂರಿಗೆ ಕೆಲಸ ಮಾಡಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ ಎಂದರು.

ಮೈಸೂರು ಲೋಕಸಭಾ  ಚುನಾವಣೆಯಲ್ಲಿ ಬಹಳ ಲೋಪ: 292 ಬೂತ್ ಗಳಲ್ಲಿ ಮತಗಳ್ಳತನ

ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಹಳ ಲೋಪವಾಗಿದೆ. ಬಿಜೆಪಿ  EVM ನಲ್ಲಿ ಮತಗಳ್ಳತನ ಮಾಡಿದೆ. ಒಟ್ಟು 2202 ಬೂತ್ ನಲ್ಲಿ 292 ಬೂತ್ ಗಳಲ್ಲಿ ಮತಗಳ್ಳತನ ಆಗಿದೆ. 292 ಇವಿಎಂ ಯಂತ್ರದಲ್ಲಿ ರಿಗ್ಗಿಂಗ್ ಆಗಿದೆ. 292 ಬೂತ್ ಗಳಲ್ಲಿ1 ಲಕ್ಷ 45 ಸಾವಿರ ಮತಗಳಿವೆ. ಅದರಲ್ಲಿ 22 ಸಾವಿರ ಮತ ಮಾತ್ರ ಕಾಂಗ್ರೆಸ್ ಗೆ  ಬಂದಿವೆ. ಕಳೆದ ನಾಲ್ಕು ಚುನಾವಣೆಯಲ್ಲಿ ಇದೇ ಬೂತ್ ಗಳಲ್ಲಿ ಕಾಂಗ್ರೆಸ್ ಗೆ ಶೇಕಡಾ 50 – 60  ಮತ ಬಂದಿದ್ದವು. ಒಂದು ಬೂತ್ ವ್ಯಾಪ್ತಿಯಲ್ಲಿ 15 ಮನೆ ಕಾಂಗ್ರೆಸ್ ಕಾರ್ಯಕರ್ತರದು. ಅಲ್ಲಿ 750 ಮತಗಳಲ್ಲವೆ. ಆದರೆ ಕಾಂಗ್ರೆಸ್ ಬಂದಿದ್ದು ಬರೀ ಏಳು ಮತ ಮಾತ್ರ. ಎನ್.ಆರ್. ಕ್ಷೇತ್ರದ ಶಾಂತಿ ನಗರದಲ್ಲೂ ಇದೇ ರೀತಿ ಆಗಿದೆ ಎಂದು ಎಂ. ಲಕ್ಷ್ಮಣ್ ಆರೋಪಿಸಿದರು.

Key words: Tippu, KRS, M. Laxman ,defends, minister, statement

The post ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಎಂ.ಲಕ್ಷ್ಮಣ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಯಕತ್ವ ಬದಲಾವಣೆ: ಸಮಯ ಬಂದಾಗ ಸಿಎಂ ಸಿದ್ದರಾಮಯ್ಯನವರೇ ಉತ್ತರ ಕೊಡ್ತಾರೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಫೆಬ್ರವರಿ,17,2026 (www.justkannada.in):  ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಈ ಬಗ್ಗೆ...

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು,ಫೆಬ್ರವರಿ,17,2026 (www.justkannada.in): ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ದ ಅಪಪ್ರಚಾರ ಪ್ರಕರಣಕ್ಕೆ...

ಡೂಪ್ಲಿನ್ ಕಾಂಪ್ಲೆಕ್ಸ್ ವರ್ತಕರನ್ನು ಖಾಲಿ ಮಾಡಿಸಿ ಆಸ್ತಿ ವಶಕ್ಕೆ ಪಡೆಯಿರಿ: MDA ಪರ ಹೈಕೋರ್ಟ್ ತೀರ್ಪು

ಮೈಸೂರು,ಫೆಬ್ರವರಿ,17,2026 (www.justkannda.in): ಮೈಸೂರಿನ ಹೃದಯಭಾಗದಲ್ಲಿರುವ “ಡೂಪ್ಲಿನ್ ಕಾಂಪ್ಲೆಕ್ಸ್”  ನ ವರ್ತಕರಿಗೆ ಹೈಕೋರ್ಟ್...

ಶಬರಿಮಲೆ ವಿವಾದ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

ನವದೆಹಲಿ,ಫೆಬ್ರವರಿ,16,2026 (www.justkannada.in): ಕೇರಳದ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ...