1
July, 2026

A News 365Times Venture

1
Wednesday
July, 2026

A News 365Times Venture

ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ರೂ. ಲೂಟಿ: ಯಾಕೆ FIR ಹಾಕಿಲ್ಲ? MLC ಸಿಟಿ ರವಿ

Date:

ಬೆಂಗಳೂರು,ಜುಲೈ,1,2026 (www.justkannada.in):  ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಎಲ್ಲರಿಗೂ ಉಚಿತ ಅಂತ ಹೇಳಿ ಈಗ ಯಾಕೆ ಪರಿಷ್ಕರಣೆಗೆ ಮುಂದಾಗಿದ್ದಾರೆ?  ಗೃಹಲಕ್ಷಿ ಯೋಜನೆಯಲ್ಲಿ 225 ಕೋಟಿ ರೂ. ಲೂಟಿಯಾಗಿದೆ.  ಆಗ ಯಾಕೆ ಎಫ್ ಐಆರ್ ಹಾಕಿಲ್ಲ. ಎಸ್ ಐಟಿ ರಚಿಸಿಲ್ಲ?   ಗೃಹಲಕ್ಷ್ಮಿ ಯೋಜನೆಯಲ್ಲಿ 2 ತಿಂಗಳ ಹಣವನ್ನೇ ಕೊಟ್ಟಿಲ್ಲ.    ಆ ಬಗ್ಗೆ ಕೇಳಿದರೇ ಅಂದಿನ ಸಚಿವರು ಉಡಾಫೆಯಿಂದ ಹೇಳಿದರು.  ಆ ಹಣ ಎಲ್ಲಿ ಹೋಯಿತು? ತನಿಖೆಗೆ ಯಾಕೆ ಆದೇಶ ಮಾಡಿಲ್ಲ?  ಬಡವರ ಹಸರಿನಲ್ಲೇ ಷಡ್ಯಂತ್ರ ಆಗಿದೆ ಎಂದು ಹರಿಹಾಯ್ದರು.

ಎಸ್ ಐಆರ್ ಕುರಿತು ಕಾಂಗ್ರೆಸ್ ನಾಯಕರ ಟೀಕೆ ವಿಚಾರ ಪ್ರತಿಕ್ರಿಯಿಸಿದ ಸಿ.ಟಿ ರವಿ,  ಕಾಂಗ್ರೆಸ್ ಅವಧಿಯಲ್ಲಿ 7 ಎಸ್ ಐಆರ್ ನಡೆದಿದೆ. ಇದು 8ನೇ ಎಸ್ ಐಆರ್ . ನಕಲಿ ಮತಗಳು ಸೇರಬಾರದು ಅಂತಾ ಎಸ್ ಐಆರ್ ನಡೆಯುತ್ತಿದೆ.  ಶುದ್ದೀಕರಣ ಪ್ರಕ್ರಿಯೆಯೆನ್ನೇ ಅನುಮಾನದಿಂದ ನೋಡುತ್ತಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಟೂಲ್ ಕಿಟ್ ಎಂದು ಕಿಡಿಕಾರಿದರು.

Key words: loot, Rs 225 crore, Grihalakshmi scheme, MLC, CT Ravi

The post ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ರೂ. ಲೂಟಿ: ಯಾಕೆ FIR ಹಾಕಿಲ್ಲ? MLC ಸಿಟಿ ರವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಿರ್ಭೀತ ಪತ್ರಿಕಾ ವೃತ್ತಿ ಸವಾಲನ್ನು ವೃತ್ತಿಪರತೆಯಿಂದ ಗೆಲ್ಲಿ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಜುಲೈ, 1,2026 (www.justkannada.in): ನಿರ್ಭೀತಿಯ ಪತ್ರಿಕಾ ವೃತ್ತಿ ಇಂದಿನ ಸಂದರ್ಭದಲ್ಲಿ...

ಅರ್ಹರಿದ್ದವರಿಗೆ ಮಾತ್ರ ಕೊಡಲು ಗೃಹಜ್ಯೋತಿ ಪರಿಷ್ಕರಣೆ- ಸಚಿವ ಕೆ.ಜೆ ಜಾರ್ಜ್

ಚಿಕ್ಕಮಗಳೂರು,ಜುಲೈ,1,2026 (www.justkannada.in):  ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಗೃಹಜ್ಯೋತಿ ಯೋಜನೆ ನೀಡುತ್ತೇವೆ....

ಮೈಸೂರಿನಲ್ಲಿ SIR ಪ್ರಕ್ರಿಯೆ: ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು

ಮೈಸೂರು,ಜುಲೈ,1,2026 (www.justkannada.in): ಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ...

ಆಷಾಢ ಶುಕ್ರವಾರ: ಈ ಬಾರಿ ಮೊಬೈಲ್ ಆ್ಯಪ್ ಮೂಲಕವೂ ಟಿಕೆಟ್ ಖರೀದಿಗೆ ಅವಕಾಶ- ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,1,2026 (www.justkannada.in): ಆಷಾಢ ಶುಕ್ರವಾರದಲ್ಲಿ ಸುಗಮ ದರ್ಶನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು...