ಬಾಗಲಕೋಟೆ,ಜುಲೈ,23,2026 (www.justkannada.in): ಚುನಾವಣೆಗಳಲ್ಲಿ ಜನರು ಹಣ ಪಡೆದು ಮತ ಹಾಕುವುದನ್ನು ಮೊದಲು ನಿಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಉಪಲೋಕಾಯುಕ್ತ ಬಿ.ವೀರಪ್ಪ ಸ್ವಾತಂತ್ರ್ಯದ ಆರಂಭದಲ್ಲಿ ದೇಶದಲ್ಲಿ ಶೇ 23 ರಷ್ಟು ಸುಶಿಕ್ಷಿತರಿದ್ದರು. ಈಗ ದೇಶದಲ್ಲಿ ಶೇ 80 ರಷ್ಟು ಜಜ ಸುಶಿಕ್ಷಿತರಿದ್ದಾರೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ, ಲಂಚಗುಳಿತನ ಹೆಚ್ಚಾಗಿದೆ. 
ನಮ್ಮಲ್ಲೂ ಇದ್ದಾರೆ. ನಿಮ್ಮಲ್ಲೂ ಇದ್ದಾರೆ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರಿಗಳು ಇದ್ದಾರೆ. ಸಮಾಜದಲ್ಲಿ ಶೇ 90 ರಷ್ಟು ಕಳ್ಳರೇ ತುಂಬಿದ್ದಾರೆ. ಜನರು ಹಣ ಪಡೆದು ವೋಟ್ ಹಾಕೋದನ್ನು ಮೊದಲು ನಿಲ್ಲಿಸಿ ಎಂದು ಉಪಲೋಕಾಯುಕ್ತ ಬಿ ವೀರಪ್ಪ ಕಿವಿಮಾತು ಹೇಳಿದರು.
Key words: People, first, stop, voting, taking, money – Deputy Lokayukta,, B. Veerappa
The post ಜನರು ಹಣ ಪಡೆದು ವೋಟ್ ಹಾಕೋದನ್ನು ಮೊದಲು ನಿಲ್ಲಿಸಬೇಕು- ಉಪಲೋಕಾಯುಕ್ತ ಬಿ.ವೀರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




