ಬೆಂಗಳೂರು,ಆಗಸ್ಟ್,18,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಅರಣ್ಯ ಸಚಿವ ರಾಮಲಿಂಗರೆಡ್ಡಿ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಬಿಡದಿ ಟೌನ್ ಶಿಪ್ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಷ್ಟವಿದ್ದವರು ಟೌನ್ ಶಿಪ್ ಗೆ ಜಮೀನು ನೀಡಲು ಹೇಳಿದ್ದಾರೆ.
ಟೌನ್ ಶಿಪ್ ಇಷ್ಟವಿಲ್ಲದಿದ್ದರೇ ಜಮೀನು ನೀಡುವುದು ಬೇಡ. ಜಮೀನು ನೀಡುವಂತೆ ಯಾರಿಗೂ ಒತ್ತಡ ಹೇರುವುದಿಲ್ಲ ಹೀಗಾಗಿ ಬಿಡದಿ ಟೌನ್ ಶಿಪ್ ವಿರುದ್ದ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಸೂಕ್ತವಲ್ಲ ಎಂದು ಸಚಿವ ರಾಮಲಿಂಗರೆಡ್ಡಿ ಆಕ್ಷೇಪಿಸಿದ್ದಾರೆ.
Key words: JDS, BJP, protest, against, township, Minister, Ramalingareddy
The post ಜಮೀನಿಗಾಗಿ ಒತ್ತಡ ಹೇರಿಲ್ಲ: ಹೀಗಾಗಿ ಟೌನ್ ಶಿಪ್ ವಿರುದ್ದ ಪ್ರತಿಭಟನೆ ಸೂಕ್ತವಲ್ಲ-ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




