17
June, 2026

A News 365Times Venture

17
Wednesday
June, 2026

A News 365Times Venture

ಜೂ.20 ರಂದು ಕೆಎಸ್ ಒಯುನಲ್ಲಿ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭ

Date:

ಮೈಸೂರು,ಜೂನ್,17,2026 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು), ಮುಕ್ತಗಂಗೋತ್ರಿ, ಮೈಸೂರು ಇಲ್ಲಿನ ಡೀನ್ (ಶೈಕ್ಷಣಿಕ) ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೇಂದ್ರದ (CIQA) ಸಂಯುಕ್ತ ಆಶ್ರಯದಲ್ಲಿ ಜೂನ್ 20 ರಂದು ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಸಮಾರಂಭವು ಜೂನ್ 20, 2026 ರಂದು ಬೆಳಿಗ್ಗೆ 11.00 ಗಂಟೆಗೆ ಕೆಎಸ್ ಒಯುವಿನ  ಘಟಿಕೋತ್ಸವ ಭವನದಲ್ಲಿ ನಡೆಯಲಿದೆ. “From Access to Excellence: The Future Pathways of Distance Education” 2 ಶೈಕ್ಷಣಿಕ ಗೋಷ್ಠಿಯನ್ನು ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಉದ್ಘಾಟಿಸಲಿದ್ದು ಇದೆ ಸಂದರ್ಭದಲ್ಲಿ ಕೆಎಸ್‌ಒಯು ಮಾಜಿ ಕುಲಪತಿ  ಡಾ. ಎನ್. ಎಸ್. ರಾಮೇಗೌಡ ಅವರ ಕೃತಿ “Education: An Overview of Formal, Open and Distance Learning” , ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮವು ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಅಧ್ಯಕ್ಷರು, ರಾಮಕೃಷ್ಣ ಆಶ್ರಮ. ಮೈಸೂರು ಇವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ. ಕೃತಿಯ ಕುರಿತು ಪ್ರೊ. ಚಂಬಿ ಪುರಾಣಿಕ್, ಮಾಜಿ ಡೀನ್, ಕೆಎಸ್‌ಒಯು ಅವರು ಪರಿಚಯಾತ್ಮಕ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶಾಸಕರಾದ ಡಿ. ರವಿಶಂಕರ್, ಕೆ. ಹರೀಶ್ ಗೌಡ, ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ  ಪ್ರೊ. ಕೆ. ಎಸ್. ರಂಗಪ್ಪ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ವಹಿಸಲಿದ್ದು, ಪ್ರೊ. ಎಸ್. ಕೆ. ನವೀನ್ ಕುಮಾರ್ (ಕುಲಸಚಿವರು). ಪ್ರೊ. ನಿರಂಜನ್ ರಾಜ್ ಎಸ್. (ಹಣಕಾಸು ಅಧಿಕಾರಿ), ಪ್ರೊ. ಎಂ. ರಾಮನಾಥಂ ನಾಯ್ಡು (ಡೀನ್, ಶೈಕ್ಷಣಿಕ) ಸೇರಿದಂತೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಸನಬದ್ಧ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ ನಡೆಯುವ ತಾಂತ್ರಿಕ ಅಧಿವೇಶನಗಳಲ್ಲಿ ಪ್ರೊ. ಅಮಿ ಉಪಾಧ್ಯಾಯ, ಕುಲಪತಿಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯ, ಅಹಮದಾಬಾದ್, ಪ್ರೊ. ಸಂಜೀವ್ ಸೋನವಾನೆ. ಕುಲಪತಿಗಳು, ಯಶವಂತರಾವ್ ಚವಾಣ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾನಿಲಯ, ನಾಸಿಕ್ ಹಾಗೂ ಡಾ. ಬಿ. ಶಡ್ರಕ್. ನಿರ್ದೇಶಕರು, COL-CEMCA, ದೆಹಲಿ ಸೇರಿದಂತೆ ಹಲವು ಗಣ್ಯರು ಮುಕ್ತ ಹಾಗೂ ದೂರ ಶಿಕ್ಷಣದ ಭವಿಷ್ಯದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

ನಂತರ ನಡೆಯುವ ವಿಶೇಷ ಅಧಿವೇಶನದಲ್ಲಿ ಡಾ. ಎಸ್.ಪಿ. ಯೋಗಣ್ಣ, ಅಧ್ಯಕ್ಷರು, ಸುಯೋಗ್ ಆಸ್ಪತ್ರೆ ಹಾಗೂ ಖ್ಯಾತ ಲೇಖಕರು, ಮೌಲ್ಯಗಳು, ನೈತಿಕತೆ ಮತ್ತು ವ್ಯಕ್ತಿತ್ವ ವಿಕಾಸ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಪ್ರೊ. ಚಂಬಿ ಪುರಾಣಿಕ್ ಅವರು ಉನ್ನತ ಶಿಕ್ಷಣದಲ್ಲಿನ ಅಡಚಣೆಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

Key words: KSOU, June 20, seminar, book release, ceremony

The post ಜೂ.20 ರಂದು ಕೆಎಸ್ ಒಯುನಲ್ಲಿ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ರೋಗಿಗಳು ಮೃತ ಪ್ರಕರಣ: ಸರ್ಕಾರಕ್ಕೆ ಕೇಂದ್ರ ಸಚಿವ HDK ತರಾಟೆ

ಮೈಸೂರು,ಜೂನ್,17,2026 (www.justkannada.in): ಮೈಸೂರು ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ರೋಗಿ ಮೃತಪಟ್ಟ...

ಜೀವ ಬೆದರಿಕೆ: ಶ್ರೀ ಪ್ರಣವಾನಂದರಾಮ್ ಸ್ವಾಮೀಜಿಗೆ ಭದ್ರತೆ ನೀಡಿವಂತೆ ಸಿಎಂಗೆ ಮನವಿ

ಬೆಂಗಳೂರು, ಜೂ,17,2026 (www.justkannda.in):  ಈಡಿಗ ಸಮುದಾಯದ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ...

ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಅಬಕಾರಿ ಅಧಿಕಾರಿಗಳು ಸಸ್ಪೆಂಡ್

ಮೈಸೂರು,ಜೂನ್,17,2026 (www.justkannada.in): ಮೈಸೂರು ನಗರದ ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್...

ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾತಿಗೂ ಡೋಂಟ್ ಕೇರ್..? ಅಬಕಾರಿ ಡಿಸಿ ಸೇಫ್, ಕಿರಿಯ ಅಧಿಕಾರಿಗಳ ಅಮಾನತು

. ಮೈಸೂರು, ಜೂ.೧೭,೨೦೨೬: ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ್ದ ಅಗ್ನಿ...