ಹಾಸನ,ಜೂನ್,26,2026 (www.justkannada.in): ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ ತಾರಕಕ್ಕೇರಿದ್ದು, ಪರ ವಿರೋಧ ಚರ್ಚೆಗಳು ಕೇಳಿ ಬರುತ್ತಿವೆ. ಈ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು. ಸರ್ಕಾರಿ ಭೂಮಿ, ಬಂಜರು ಭೂಮಿ ಇರುವ ಕಡೆ ಟೌನ್ ಶಿಪ್ ಮಾಡಿ ರಿಯಲ್ ಎಸ್ಟೇಟ್ ನವರು ಮಾಡುವ ಕೆಲಸವನ್ನು ನೀವು ಮಾಡಬೇಡಿ ಎಂದರು.
ಹೆಚ್ ಡಿ ಕುಮಾರಸ್ವಾಮಿ ಭೈರಮಂಗಲಕ್ಕೆ ಬನ್ನಿ ಅಲ್ಲೇ ನಿರ್ಧಾರವಾಗಲಿ ಎಂದಿದ್ದಾರೆ. ರೈತರ ಜೊತೆ ಚರ್ಚೆ ಮಾಡಲು ನಿಮಗೇನು ಸಮಸ್ಯೆ? ಟೌನ್ ಶಿಪ್ ಬಗ್ಗೆ ವಿಧಾನಸೌಧದಲ್ಲೇ ಚರ್ಚೆ ಮಾಡುವ ಅಗತ್ಯವೇನಿದೆ. ರೈತರಿಗೆ ಇಷ್ಟ ಇಲ್ಲದಿದ್ದರೇ ಬಿಡದಿ ಟೌನ್ ಶಿಪ್ ಯೋಜನೆಯನ್ನೇ ಕೈಬಿಡಿ. ನಾನು ಮಾಡೇ ತೀರುತ್ತೇನೆ ಎನ್ನಲು ಇದೇನು ಸರ್ವಾಧಿಕಾರ ಅಲ್ಲ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
Key words: farmers, land, township, Pratap Simha
The post ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




