28
June, 2026

A News 365Times Venture

28
Sunday
June, 2026

A News 365Times Venture

ನಾಯಕತ್ವ ಬದಲಾವಣೆ ವಿಚಾರ: ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ-ಶಾಸಕ ರಂಗನಾಥ್

Date:

ತುಮಕೂರು,ಏಪ್ರಿಲ್,25,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಹೈಕಮಾಂಡ್ ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ತಿಳಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಡಾ.ರಂಗನಾಥ್, ರಾಜ್ಯದಲ್ಲಿ ರಾಜಕೀಯ ಸನ್ನಿವೇಶಗುತ್ತಿರುವುದು ನಿಮಗೆಲ್ಲಾ ಗೊತ್ತಿದೆ.  ಹೈಕಮಾಂಡ್ ನಿರ್ಧಾರವನ್ನ ತಲೆಬಾಗಿಸಿ ಪಾಲಿಸುತ್ತೇವೆ ಹೈಕಮಂಡ್ ಬಗೆಹರಿಸುತ್ತೆ ಎಂಬ ಭಾವನೆಯಲ್ಲಿ ನೋಡುತ್ತಿದ್ದೇವೆ.  ಅವಶ್ಯಕತೆ ಬಂದರೆ ನಾವೆಲ್ಲಾ ದೆಹಲಿಗೆ ಹೋಗುತ್ತೇವೆ ಈ ಬಗ್ಗೆ ಹೈಕಮಂಡ್ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಒಬ್ಬ ಶಾಸಕ ಕಾಂಗ್ರೆಸ್ಸಿಗನಾಗಿ ನಾವೆಲ್ಲಾ ಶಿಸ್ತಿನಲ್ಲಿರುವವರು . ಒಡಂಬಡಿಕೆ ಆಗಿದೆ ಎಂಬ ಮಾತನ್ನು ಇಬ್ಬರು ಹೇಳಿದ್ದಾರೆ. ದೆಹಲಿ ಕಡೆ ಮುಖ ಮಾಡಿ ನೋಡುತ್ತಿದ್ದೇವೆ . ಅವಶ್ಯಕತೆ ಇದ್ದರೆ ನಾವು ದೆಹಲಿಗೆ ಹೋಗುತ್ತೇವೆ ಎಂದರು.

ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗ್ತಾರಾ ಎಂಬ ವಿಚಾರ ಈ ಬಗ್ಗೆ ಹೈಕಮಾಂಡ್  ನಿರ್ಧಾರ ತೆಗೆದುಕೊಳ್ಳುತ್ತಾರೆ . ನನ್ನ ವೈಯಕ್ತಿಕ ಆಲೋಚನೆ ನಿಮಗೆ ಗೊತ್ತಿದೆ ಸಿಎಂ ವಿಚಾರವಾಗಿ ಮಾತನಾಡಬಾರದೆಂದು ನೋಟಿಸ್ ನೀಡಿದ್ದಾರೆ. ಹೀಗಾಗಿ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದು ಡಾ.ರಂಗನಾಥ್ ತಿಳಿಸಿದರು.

Key words: CM, change, issue, MLA Ranganath

The post ನಾಯಕತ್ವ ಬದಲಾವಣೆ ವಿಚಾರ: ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ-ಶಾಸಕ ರಂಗನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿ ವರ್ಷ ಬೆಂಗಳೂರಿನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಜೂನ್, 27,2026 (www.justkannada.in):  ಇನ್ಮುಂದೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ...

“JUST KANNADA” ಸರಣಿ ವರದಿ : ಫಾಕ್ಸ್ ಡೆನ್ ಬಾರ್ ಅಗ್ನಿ ದುರಂತ, ಕಡೆಗೂ ಅಬಕಾರಿ ಡಿಸಿ ನಾಗರಾಜಪ್ಪ ಅಮಾನತು.

  ಮೈಸೂರು, ಜೂ.27: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್...

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ

ಚೆನ್ನೈ, ಜೂನ್,27,2026 (www.justkannada.in):  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರ...

ಪ್ರೇಯಸಿಗೆ ಚಾಕು ಇರಿತ:  ಕಾರು ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ

ತುಮಕೂರು,ಜೂನ್,27,2026 (www.justkannada.in):  ತನ್ನ ಪ್ರೇಯಸಿಯನ್ನು ಅಪಹರಿಸಿದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ...