27
June, 2026

A News 365Times Venture

27
Saturday
June, 2026

A News 365Times Venture

‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ

Date:

ಬೆಂಗಳೂರು,ಮಾರ್ಚ್,3,2026 (www.justkannada.in):  ಇರಾನ್ ಮೇಲೆ ಇಸ್ರೇಲ್ ,ಅಮೇರಿಕಾ ದಾಳಿ ಬೆನ್ನಲ್ಲೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಸೇರಿ ಭಾರತೀಯರನ್ನ ವಾಪಸ್ ತಾಯ್ನಾಡಿಗೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರು ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ  ಎಂಎಲ್ ಸಿ ಭೋಜೆಗೌಡ ” ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ, ಅಲ್ಲಿಂದ ಭಾರತಕ್ಕೆ ವಾಪಸ್‌ ದುಬೈ ಮೂಲಕ ಬರಬೇಕಿತ್ತು. ಆದರೆ ನನ್ನ ಫ್ಲೈಟ್‌ ತಡವಾಯಿತು. ಆಗ ಕಾರಣವನ್ನು ವಿಚಾರಿಸಿದಾಗ ಅಬುದಾಬಿಯಲ್ಲಿ ಬಾಂಬ್ ದಾಳಿ ಆಗುತ್ತಿದೆ ಎಂದರು, ಇದಾದ ಕೆಲ ಹೊತ್ತಿನಲ್ಲೇ ನಮ್ಮನ್ನು ಫ್ಲೈಟ್ ನಿಂದಲೇ ಇಳಿಸಿದರು. . ಆ ಕ್ಷಣದಲ್ಲಿ ನಾವು ಏನು ಮಾಡಬೇಕು ಅನ್ನೋದು ತಿಳಿಯಲಿಲ್ಲ. ನಾನು ನನ್ನ ಪತ್ನಿ ಬದುಕಿ ಬರುತ್ತೇವೆ.  ಅಂದುಕೊಂಡಿರಲಿಲ್ಲ. ನಾವು ಭಾರತಕ್ಕೆ ಜೀವಂತ ಬರುತ್ತೇವೆ ಎಂದು ಕೊಂಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ವೇಳೆ  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು  ದೂರವಾಣಿ ಕರೆ ಮೂಲಕ ಧೈರ್ಯ ತುಂಬಿ ದುಬೈ ಹೋಟೆಲ್‌ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಆದಾಗ್ಯೂ, ನನಗೆ ಅಲ್ಲಿನ ಪರಿಸ್ಥಿತಿಗಳಿಂದ ಆತಂಕ ಕಾಡುತ್ತಲೇ ಇತ್ತು ಇನ್ನು, ಸಿಎಂ ಸಿದ್ದರಾಮಯ್ಯ , ಸಚಿವರಾದ ಕೃಷ್ಣ ಭೈರೇಗೌಡ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿ ಕುರಿತು ತಿಳಿದುಕೊಂಡರು. ಅಲ್ಲಿನ ಯುದ್ದವಾತಾವರಣದಿಂದ ನಾವು ಇಷ್ಟು ಬೇಗ ತಾಯ್ನಾಡಿಗೆ ಮರಳುತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಅವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.

Key words: MLC, Bhoje Gowda, situation, Dubai

The post ‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

“JUST KANNADA” ಸರಣಿ ವರದಿ : ಫಾಕ್ಸ್ ಡೆನ್ ಬಾರ್ ಅಗ್ನಿ ದುರಂತ, ಕಡೆಗೂ ಅಬಕಾರಿ ಡಿಸಿ ನಾಗರಾಜಪ್ಪ ಅಮಾನತು.

  ಮೈಸೂರು, ಜೂ.27: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್...

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ

ಚೆನ್ನೈ, ಜೂನ್,27,2026 (www.justkannada.in):  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರ...

ಪ್ರೇಯಸಿಗೆ ಚಾಕು ಇರಿತ:  ಕಾರು ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ

ತುಮಕೂರು,ಜೂನ್,27,2026 (www.justkannada.in):  ತನ್ನ ಪ್ರೇಯಸಿಯನ್ನು ಅಪಹರಿಸಿದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ...

ಚಂಗ್ಲು ತರ ಆಡ್ತಿರೋ ಕೇಂದ್ರ ಸಚಿವ ಎಚ್ಡಿಕೆ; ಶಾಸಕ ಉದಯ್

ಮಂಡ್ಯ,ಜೂನ್,27,2026 (www.justkannada.in): ಬಿಡದಿ ಟೌನ್‌ ಶಿಪ್ ಯೋಜನೆ ವಿಚಾರವಾಗಿ ರಾಜಕೀಯ ವಾಗ್ವಾದ...