29
June, 2026

A News 365Times Venture

29
Monday
June, 2026

A News 365Times Venture

ಪಹಲ್ಗಾಮ್ ಉಗ್ರರ ದಾಳಿ: ಕೂಡಲೇ ಸರ್ವಪಕ್ಷ ಸಭೆ ಕರೆಯಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ

Date:

ಬೆಂಗಳೂರು,ಏಪ್ರಿಲ್,23,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಘಟನೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇದು ಎಲ್ಲರೂ ಒಂದಾಗಿರುವ ಸಮಯ. ಈಗ ಭಿನ್ನಾಭಿಪ್ರಾಯ ಮೂಡಿಸುವ ಸಮಯವಲ್ಲ. ಕೂಡಲೇ ಸರ್ವ ಪಕ್ಷ ಸಭೆ ಕರೆಯಿರಿ  ಎಂದು ಆಗ್ರಹಿಸಿದ್ದಾರೆ.

ಬೇಸಿಗೆ ಕಾಲ ಪ್ರಾರಂಭ ಆರಂಭ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರಿಂದಲೇ ಅಲ್ಲಿಯ ಜನ ಜೀವನ ನಡೆಯಬೇಕು. ಓಮರ್ ಅಬ್ದುಲ್ಲಾ ಕೂಡ ಇದನ್ನು ಹೇಳಿದ್ದಾರೆ.‌ ಇಂತಹ ಘಟನೆಗಳಿಂದ ಆಗುವ ಪರಿಣಾಮಗಳ ಬಗ್ಗೆ ಕೂಡ ಓಮರ್ ಅಬ್ದುಲ್ಲಾ ಮಾತಾಡಿದ್ದಾರೆ. ರಾಜ್ಯದ ಪ್ರಭುತ್ವದ ಮೇಲಿನ ನೇರ ದಾಳಿ ಇದು ಎಂದು  ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಎಲ್ಲರೂ ಕೂಡ ಒಂದಾಗಿ ಪರಿಸ್ಥಿತಿಯನ್ನು ಎದುರಿಸಬೇಕಾದ ಸಮಯ ಇದಾಗಿದೆ‌. ಕಾಶ್ಮೀರ ಪಹಲ್ಗಾಮ್ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸಾವನ್ನಪ್ಪಿದ್ದಾರೆ. ಅವರ ಪತ್ನಿಯರ ಜೊತೆಗೆ ಮಾತಾಡಿ ಸಾಂತ್ವನ ಹೇಳಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. .

ಭದ್ರತಾ ವೈಪಲ್ಯ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ,  , ಈ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಶಾಕ್ ಸಂದರ್ಭದಲ್ಲಿದ್ದೇವೆ. ನಾಳೆ ಇದರ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

Key words: Pahalgam, terrorist, attack. Mallikarjuna Kharge,  all -party meeting

The post ಪಹಲ್ಗಾಮ್ ಉಗ್ರರ ದಾಳಿ: ಕೂಡಲೇ ಸರ್ವಪಕ್ಷ ಸಭೆ ಕರೆಯಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿ ವರ್ಷ ಬೆಂಗಳೂರಿನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಜೂನ್, 27,2026 (www.justkannada.in):  ಇನ್ಮುಂದೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ...

“JUST KANNADA” ಸರಣಿ ವರದಿ : ಫಾಕ್ಸ್ ಡೆನ್ ಬಾರ್ ಅಗ್ನಿ ದುರಂತ, ಕಡೆಗೂ ಅಬಕಾರಿ ಡಿಸಿ ನಾಗರಾಜಪ್ಪ ಅಮಾನತು.

  ಮೈಸೂರು, ಜೂ.27: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್...

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ. ಭಾಗ್ಯರಾಜ್ ನಿಧನ

ಚೆನ್ನೈ, ಜೂನ್,27,2026 (www.justkannada.in):  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರ...

ಪ್ರೇಯಸಿಗೆ ಚಾಕು ಇರಿತ:  ಕಾರು ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ

ತುಮಕೂರು,ಜೂನ್,27,2026 (www.justkannada.in):  ತನ್ನ ಪ್ರೇಯಸಿಯನ್ನು ಅಪಹರಿಸಿದ ಪಾಗಲ್ ಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದ...