ನವದೆಹಲಿ,ಮೇ,11,2026 (www.justkannada.in): ಮಧ್ಯ ಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶಕ್ಕೆ ತೈಲ ಅಭಾವದ ಸಂಕಷ್ಟ ಉಂಟಾದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಸಂದೇಶಗಳನ್ನ ಕೊಟ್ಟಿದ್ದಾರೆ.
ತೈಲ ಅಭಾವದ ಸಂಕಷ್ಟ ದೂರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ , ಅಡುಗೆ ಎಣ್ಣೆಯನ್ನು ಮಿತವಾಗಿ ಬಳಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಅಡಿಗೆ ಎಣ್ಣೆ ಬಳಕೆ ಕಡಿಮೆ ಮಾಡಿದರೆ ದೇಹಕ್ಕೆ ಒಳ್ಳೆಯದು. ಕೃಷಿಜಮೀನಿನಲ್ಲಿ ರೈತರು ಹೆಚ್ಚು ರಸಗೊಬ್ಬರ ಬಳಸಬೇಡಿ. ನೈಸರ್ಗಿಕ ಕೃಷಿಗೆ ಒತ್ತು ನೀಡಿ ಭೂಮಿ ಫಲವತ್ತಾಗಿರುತ್ತದೆ. ವಿದೇಶ ಪ್ರಯಾಣ ವಿದೇಶಿ ಉತ್ಪನ್ನ ಖರೀದಿಸಬೇಡಿ. ಪೆಟ್ರೋಲ್, ಡೀಸೆಲ್ ವಾಹನ ಹೆಚ್ಚು ಬಳಸಬೇಡಿ, ಎಲೆಕ್ಟ್ರಿಕ್, ಮೇಟ್ರೋ, ಸಾರಿಗೆ ವಾಹನ ಬಳಸಿ, 1 ವರ್ಷದವರೆಗೂ ಚಿನ್ನಾಭರಣ ಖರೀದಿ ಮಾಡಬೇಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
Key words: petrol, diesel, cooking oil, PM Modi, message
The post ಪೆಟ್ರೋಲ್, ಡೀಸೆಲ್ , ಅಡುಗೆ ಎಣ್ಣೆ ಮಿತವಾಗಿ ಬಳಸಿ- ದೇಶದ ಜನತೆಗೆ ಪ್ರಧಾನಿ ಮೋದಿ ಸಂದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




