17
September, 2026

A News 365Times Venture

17
Thursday
September, 2026

A News 365Times Venture

ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆ ವ್ಯತ್ಯಯ: 101 ಬಂಕ್‌ ಗಳ ವಿರುದ್ಧ ಕೇಸ್-ಸಚಿವ ರಿಜ್ವಾನ್ ಅರ್ಷಾದ್

Date:

ಬೆಂಗಳೂರು, ಸೆಪ್ಟೆಂಬರ್, 16,2026 (www.justkannada.in): ಪೆಟ್ರೋಲ್ ಬಂಕ್​ ಗಳಲ್ಲಿ ಅಳತೆಯಲ್ಲಿ ಲೋಪವೆಸಗುತ್ತಿರುವುದು ಕಂಡು ಬಂದಿದ್ದು ಈ ಮಧ್ಯೆ  101 ಬಂಕ್‌ ಗಳ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಜ್ವಾನ್ ಅರ್ಷಾದ್,  ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್‌ ಗಳಿದ್ದು, ಕಳೆದ ಒಂದು ವಾರದಲ್ಲಿ ಇಲಾಖೆಯ ಅಧಿಕಾರಿಗಳು 805 ಬಂಕ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 768 ಬಂಕ್‌ಗಳಲ್ಲಿ ಅಳತೆ ವ್ಯತ್ಯಯ ಕಂಡುಬಂದಿದೆ., 101 ಬಂಕ್‌ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೆಟ್ರೋಲ್ ಬಂಕ್‌ ಗಳ ಕ್ಯಾಲಿಬರೇಷನ್ ಹಾಗೂ ಪರಿಶೀಲನೆಯ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಿ, ಅದನ್ನು ಡಿಸ್ಪ್ಲೇ ಮೂಲಕ ಸಾರ್ವಜನಿಕರ ಗಮನಕ್ಕೆ ತರುವಂತೆ ಸೂಚಿಸಲಾಗುವುದು ಎಂದರು.

ಪೆಟ್ರೋಲ್ ಬಂಕ್‌ಗಳ ಮಾಲೀಕರು ಪ್ರತಿದಿನ ಪೆಟ್ರೋಲ್ ಗನ್‌ ಗಳ ಅಳತೆಯನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗುವುದು. ಗ್ರಾಹಕರಿಗೆ ಅಳತೆಯ ಬಗ್ಗೆ ಅನುಮಾನ ಬಂದರೆ, ನಿಗದಿತ ಮಾಪಕಗಳ ಮೂಲಕ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗುವುದು. ಬಂಕ್‌ಗಳಲ್ಲಿ ಸೂಕ್ತ ಶುಚಿತ್ವ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆಯೂ ಸೂಚನೆ ನೀಡಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.

ಪೆಟ್ರೋಲ್ ಬಂಕ್‌ ಗಳಲ್ಲಿ ಅಳತೆ, ಗುಣಮಟ್ಟ, ಶುಚಿತ್ವ ಅಥವಾ ಇತರ ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು 18005991100 ಟೋಲ್‌ಫ್ರೀ ಸಂಖ್ಯೆಗೆ ದೂರು ನೀಡುವಂತೆ ಸಚಿವ ರಿಜ್ವಾನ್ ಅರ್ಷಾದ್  ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ ಅಧಿಸೂಚನೆಗಳಿಗೆ ಸಚಿವರಿಂದ ಆಕ್ಷೇಪ

ಕೇಂದ್ರ ಸರ್ಕಾರದ ಕ್ಯಾಲಿಬರೇಷನ್‌ಗೆ ಸಂಬಂಧಿಸಿದ ಎರಡು ಅಧಿಸೂಚನೆಗಳಿಗೆ ರಾಜ್ಯ ಸರ್ಕಾರದ ಆಕ್ಷೇಪವಿದೆ. ಈ ಹಿಂದೆ ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡಿಸಬೇಕಿದ್ದ ನಿಯಮವನ್ನು ಎರಡು ವರ್ಷಕ್ಕೊಮ್ಮೆ ಮಾಡುವಂತೆ ಬದಲಾವಣೆ ಮಾಡಲಾಗಿದೆ. ಅಲ್ಲದೆ, ಪೆಟ್ರೋಲ್ ಗನ್‌ ಗಳ ಕ್ಯಾಲಿಬರೇಷನ್‌ ಅನ್ನು ಖಾಸಗಿಯವರು ಮಾಡಬಹುದು ಎಂಬ ಮತ್ತೊಂದು ಅಧಿಸೂಚನೆಯೂ ಬಂದಿದೆ. ಖಾಸಗಿಯವರು ಕ್ಯಾಲಿಬರೇಷನ್ ಮಾಡಿದರೆ ಅದರ ವಿಶ್ವಾಸಾರ್ಹತೆ ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಇದೆ ಎಂದು ಸಚಿವ ರಿಜ್ವಾನ್ ಅರ್ಷಾದ್ ಆಕ್ಷೇಪಿಸಿದರು.

Key words: Discrepancies, measurement, petrol bunks, Cases, Minister, Rizwan Arshad

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ 25,000 ರೂ.ಗೆ ಹೆಚ್ಚಳ

ನವದೆಹಲಿ,ಸೆಪ್ಟಂಬರ್,16,2026 (www.justkannada.in):  ದೇಶದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು,...

ಪ್ರದೋಷ್ ಮಾಫಿ ಸಾಕ್ಷಿ: ದರ್ಶನ್ ವಕೀಲರ ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್,16,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎ14 ಪ್ರದೋಷ್ ಮಾಫಿ...

KPSC ವಿಚಾರವಾಗಿ ಚರ್ಚಿಸಲು ರೆಡಿ, ಬಿಜೆಪಿಯವರು ಚರ್ಚೆಗೆ ಬರಲಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ‍ಪ್ಟಂಬರ್,16,2026 (www.justkannada.in):  ಕೆಪಿಎಸ್ ಸಿ ಹಗರಣ ವಿಚಾರವಾಗಿ ಚರ್ಚಿಸಲು ನಾವು ರೆಡಿ...

ಮೈಸೂರು ದಸರಾಕ್ಕೆ ಹೊಸ ಮೆರುಗು: ನ್ಯಾಷನಲ್ ಜಿಯಾಗ್ರಫಿಕ್‌ನಲ್ಲಿ ಸಾಕ್ಷ್ಯಚಿತ್ರ, ಗೋಲ್ಡ್ ಕಾರ್ಡ್‌ಗೆ ಸೀಟ್ ನಂಬರ್!

  ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಈ ಬಾರಿ ಹಲವು ಹೊಸ...