22
August, 2026

A News 365Times Venture

22
Saturday
August, 2026

A News 365Times Venture

ಮಂಡ್ಯ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ ತೃತೀಯ ಲಿಂಗಿ ಆಯ್ಕೆ

Date:

ಮಂಡ್ಯ,ಆಗಸ್ಟ್, 21,2026 (www.justkannada.in): ತೃತೀಯ ಲಿಂಗಿ ಮೈನಾ ಹೆಚ್. ಅವರು ಮಂಡ್ಯ  ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ (KVK)ದ ಸಹಾಯಕ (Assistant) ಹುದ್ದೆಗೆ ಆಯ್ಕೆಯಾಗಿದ್ದಾರೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು –ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ ನಡೆದ ನಿಗದಿತ  ನೇಮಕಾತಿ ಪ್ರಕ್ರಿಯೆಯಲ್ಲಿ ತೃತೀಯ ಲಿಂಗಿ ಮೈನಾ ಹೆಚ್. ಅವರು ನೇಮಕಗೊಂಡಿದ್ದಾರೆ.

ಮೈನಾ ಹೆಚ್. ಅವರು 2015ರಲ್ಲಿ B.T.L. Institute of Technology and Management ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಶೇ. 71.73 ಅಂಕಗಳೊಂದಿಗೆ ಪೂರ್ಣಗೊಳಿಸಿದ್ದಾರೆ. ಖಾಸಗಿ ವಲಯದಲ್ಲಿ ವೃತ್ತಿ ಅನುಭವ ಪಡೆದ ನಂತರ, ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಮೂಲಕ ಸರ್ಕಾರಿ ಸೇವೆಗೆ ಆಯ್ಕೆಯಾಗಿದ್ದಾರೆ.

ತಮ್ಮ ಸಾಧನೆಯ ಕುರಿತು ಮಾತನಾಡಿದ ಮೈನಾ ಹೆಚ್. ಅವರು, “ಶಿಕ್ಷಣ, ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ನನ್ನ ಕನಸು ನನಸಾಗಿದೆ. ದೊರೆತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ” ಎಂದು ಹೇಳಿದ್ದಾರೆ.

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಅವರು, ಮೈನಾ ಹೆಚ್. ಅವರನ್ನು ಅಭಿನಂದಿಸಿ, “ಶಿಕ್ಷಣ, ಸಾಮರ್ಥ್ಯ ಮತ್ತು ಪ್ರತಿಭೆಯ ಆಧಾರದ ಮೇಲೆ ಸರ್ಕಾರಿ ಸೇವೆಗೆ ಆಯ್ಕೆಯಾಗಿರುವ ಮೈನಾ ಅವರ ಸಾಧನೆ ಶ್ಲಾಘನೀಯ. ಕೃಷಿ ವಿಶ್ವವಿದ್ಯಾಲಯಗಳ ವ್ಯವಸ್ಥೆಯಲ್ಲಿ ತೃತೀಯ ಲಿಂಗದ ವ್ಯಕ್ತಿಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆಯು ತೃತೀಯ ಲಿಂಗದ ಯುವಜನರು ಶಿಕ್ಷಣ, ಉದ್ಯೋಗ ಮತ್ತು ಸ್ವಾವಲಂಬನೆಯತ್ತ ಮುನ್ನಡೆಯಲು ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.

Key words:  transgender, selected, post Assistant, Agricultural Science Center, Mandya

The post ಮಂಡ್ಯ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ ತೃತೀಯ ಲಿಂಗಿ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಡದಿ ಟೌನ್ ಶಿಪ್  ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ

ರಾಮನಗರ,ಆಗಸ್ಟ್,22,2026 (www.justkannada.in):   ಬಿಡದಿ ಟೌನ್ ಶಿಪ್  ಅನ್ನು ಹೆಚ್ ಡಿ ಕುಮಾರಸ್ವಾಮಿ...

ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಆಗಸ್ಟ್,22,2026 (www.justkannada.in): ಭಾರತದ  ಶಿಕ್ಷಣ ವ್ಯವಸ್ಥೆ  ಈಗ ಆರ್ ಎಸ್ ಎಸ್...

ದಸರಾ ಗಜಪಯಣಕ್ಕೆ ದಿನಾಂಕ ನಿಗದಿ: ಆ. 26ರಂದು ಚಾಲನೆ

ಮೈಸೂರು,ಆಗಸ್ಟ್,22,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾದ...

ಬಿಜೆಪಿಗೆ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಗೌರವವಿಲ್ಲ: ಸಚಿವ ಮಧು ಬಂಗಾರಪ್ಪ ಕಿಡಿ

ಬೆಂಗಳೂರು, ಆಗಸ್ಟ್,21,2026 (www.justkannada.in): ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ವಿಧಾನಮಂಡಲದಲ್ಲಿ ಚರ್ಚೆ...