5
May, 2026

A News 365Times Venture

5
Tuesday
May, 2026

A News 365Times Venture

ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ವೀಸಾ ವ್ಯವಸ್ಥೆ- ಸಚಿವ ಕೃಷ್ಣ ಭೈರೇಗೌಡ

Date:

ಬೆಂಗಳೂರು,ಮಾರ್ಚ್,2,2026 (www.justkannada.in):  ಇರಾನ್ , ಇಸ್ರೇಲ್ ಸಂಘರ್ಷ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ವೀಸಾ ವ್ಯವಸ್ಥೆಗೆ ಪ್ರಯತ್ನ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ,  ಬಹಳಷ್ಟು ಜನ ಮಧ್ಯಪ್ರಾಚ್ಯ ದೇಶಗಳ ಏರ್ ಪೋರ್ಟ್ ನಲ್ಲಿ ಸಿಲುಕಿದ್ದಾರೆ. ಜನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಮಾಹಿತಿ ಇದೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ.  ವೀಸಾ ಸಮಸ್ಯೆ ಇದ್ದರೆ ಸಹಾಯವಾಣಿಗೆ ಕರೆ ಮಾಡಬಹುದು ಎಂದಿದ್ದಾರೆ.

ಏರ್ ಪೋರ್ಟ್ ನಲ್ಲಿ ಸಿಲುಕಿಕೊಂಡ ಕನ್ನಡಿಗರಿಗೆ ವಿಸಾಗೆ ಪ್ರಯತ್ನ ಮಾಡುತ್ತೇವೆ. ಕೇಂದ್ರದ ಜೊತೆ ಮಾತನಾಡಿ ವೀಸಾ ವ್ಯವಸ್ಥೆ ಮಾಡಿಸುತ್ತೇವೆ. ಏರ್ ಪೋರ್ಟ್ ನಿಂದ ಹೊರಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.  ವೀಸಾ ಮೂಲಕ ಹೊರ ಬಂದರೆ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡುತ್ತೇವೆ.  ರಾಯಭಾರ ಕಚೇರಿ ಮೂಲಕ ಹೋಟಲ್ ವ್ಯವಸ್ಥೆ ಮಾಡಿ ಅದರ ಖರ್ಚು ವೆಚ್ಚವನ್ನು ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರ ಎಲ್ಲಾ ಸಹಕಾರ ನೀಡಲು ಸಿದ್ದ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Key words: Visa, arrangements, Kannadigas, Minister, Krishna Bhairegowda

The post ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ವೀಸಾ ವ್ಯವಸ್ಥೆ- ಸಚಿವ ಕೃಷ್ಣ ಭೈರೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯಭೇರಿ

ದಾವಣಗೆರೆ,ಮೇ,4,2026 (www.justkannada.in): ಬಹಳ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ...

ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ  20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ

ಮೈಸೂರು,ಮೇ,4,2026 (www.justkannada.in): ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮೈಸೂರಿನಲ್ಲಿ 20ಕ್ಕೂ ಹೆಚ್ಚು ಥೀಮ್ಡ್...

ಅಂಚೆ ಮತ ಮರು ಎಣಿಕೆ : ಶಾಸಕ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿಯ ಡಿ.ಎನ್‌ ಜೀವರಾಜ್

ಚಿಕ್ಕಮಗಳೂರು,ಮೇ,4,2026 (www.justkannada.in):  ಹೈಕೋರ್ಟ್‌ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ...

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ ಒತ್ತು...