26
June, 2026

A News 365Times Venture

26
Friday
June, 2026

A News 365Times Venture

ಮಹಿಳಾ ಸಂಘಟನೆಯ ಕ್ರಿಯಾಶೀಲ ಚಿಂತಕಿ ಮಂಜುಳಾ ಬಿ ಸಿ ಕಾಲವಶ.

Date:

 

ಮೈಸೂರು, ಏ.೧೫,೨೦೨೫: ನಗರದ ವಾಸುದೇವ ಸೋಮಾನಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತರಾಗಿದ್ದ ಪ್ರಾಧ್ಯಾಪಕರಾದ ಮಂಜುಳಾ ಬಿ ಸಿ ಅವರು ಕಾಲವಶರಾಗಿದ್ದಾರೆ.

ಕೆಲ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಮಹಿಳಾ ಸಂಘಟನೆಯಲ್ಲಿ ಕ್ರಿಯಾಶೀಲರಾಗಿದ್ದ ಇವರು ಮಗ ಮೇಜರ್ ಭಾರತಿ ನಂದ ಮತ್ತು ಸಂಗಾತಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಅವರನ್ನು ಅಗಲಿದ್ದಾರೆ.

ಹಾಸನ ಸಮೀಪದ ಬುಸ್ತೇನಹಳ್ಳಿಯಲ್ಲಿ ಜನಿಸಿದ ಇವರು ವಿದ್ಯಾಭ್ಯಾಸಕ್ಕಾಗಿ ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದರು. ಅನಂತರ ಮೈಸೂರಿನಲ್ಲಿ ಕನ್ನಡ ಎಂ.ಎ., ಮುಗಿಸಿ ಕನ್ನಡ ಅಧ್ಯಾಪಕರಾಗಿ ಸೇವೆಗೆ ಸೇರಿಕೊಂಡರು.

ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದ ಇವರು, ಅನೇಕ ಲೇಖನಗಳನ್ನು ಕೂಡ ಬರೆದಿದ್ದಾರೆ. ನಾಸ್ತಿಕರಾಗಿದ್ದ ಇವರು, ಶುಷ್ಕ ಆಚರಣೆಗಿಂತ ಹೆಣ್ಣಿಗೆ ವಿದ್ಯೆ ಮುಖ್ಯ ಎಂದು ನಂಬಿದ್ದರು.

ಬುಧವಾರ ದಿನಾಂಕ 16ರಂದು ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

key words: Manjula B C, activist, women’s organisation, passes away

Manjula B C, an activist thinker of women’s organisation, passes away

The post ಮಹಿಳಾ ಸಂಘಟನೆಯ ಕ್ರಿಯಾಶೀಲ ಚಿಂತಕಿ ಮಂಜುಳಾ ಬಿ ಸಿ ಕಾಲವಶ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಕೃತಿ ವಿಕೋಪ ನಿರ್ವಹಣೆ: ಜಿಲ್ಲೆಗಳ ಮೇಲುಸ್ತುವಾರಿಗೆ ಸಚಿವರ ನೇಮಕ

ಬೆಂಗಳೂರು, ಜೂನ್, 24,2026 (www.justkannada.in):  ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ...

ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ: ಅರುಣ್ ಯೋಗಿರಾಜ್ ಶಿಲ್ಪಕ್ಕೆ ಮೆಚ್ಚುಗೆ

ಮೈಸೂರು,ಜೂನ್,25,2026 (www.justkannada.in):  ನಗರದ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಆವರಣದ ಬಳಿ ರಾಜ್ಯದ...

ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ: ಸೆಸ್ಕ್‌ ನಿಂದ ಆಕ್ಷೇಪಣೆ ಸಲ್ಲಿಕೆ

ಮೈಸೂರು, ಜೂನ್. 25, 2026 (www.justkannada.in): ಟಾಟಾ ಪವರ್ ಕಂಪನಿ ಲಿಮಿಟೆಡ್...

ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಕೊಪ್ಪಳ, ಜೂನ್,25,2026 (www.justkannada.in):  “ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಕರ್ನಾಟಕ,...