7
March, 2026

A News 365Times Venture

7
Saturday
March, 2026

A News 365Times Venture

ಮೈಸೂರಿನಲ್ಲೂ ಕುಸಿದ ಮಾವು ಬೆಲೆ: ಏರಿದ ‘ನೇರಳೆ ಹಣ್ಣಿನ ದರ..!

Date:

ಮೈಸೂರು,ಜೂನ್,13,2025 (www.justkannada.in): ರಾಜ್ಯದ ಹಲವು ಭಾಗಗಳಲ್ಲಿ ಮಾವಿನ ಹಣ್ಣಿನ ಬೆಲೆ ಇಳಿಕೆಯಾಗಿದ್ದು, ಉತ್ತಮ ಫಸಲು ಬಂದಿದ್ದರೂ ಬೆಲೆ ಇಳಿಕೆಯಿಂದ ರೈತ ಕಂಗಾಲಾಗಿದ್ದಾನೆ.  ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮಾವು ಬೆಲೆ ನೆಲೆ ಕಚ್ಚಿದ್ದು, ಸೂಕ್ತ ಬೆಲೆ ಸಿಗದೆ ಹಲವೆಡೆ ರೈತರು ಮಾವಿನ ಹಣ್ಣನ್ನ ಬೀದಿಗೆ ಸುರಿದಿದ್ದಾರೆ.

ಮಾರುಕಟ್ಟೆಗೆ ಆರಂಭದಲ್ಲಿ ಕೆ.ಜಿಗೆ ₹ 150 ರಿಂದ 200 ರೂ. ಇದ್ದ ಮಾವು ಈಗ 100 ರೂಪಾಯಿಗೆ 3 ಕೆ.ಜಿಯಾಗಿದೆ.  ರೈತರ ಬಳಿ ಕೆ.ಜಿಗೆ 10 ರೂಗೂ ಕಡಿಮೆ ದರದಲ್ಲಿ ತೆಗೆದುಕೊಂಡರೆ ಮಧ್ಯವರ್ತಿಗಳ ಮಾರಾಟಗಾರರಲ್ಲಿ ಕೆ.ಜಿಗೆ 40ರಿಂದ 50 ರೂ.ನಲ್ಲಿ ಮಾರಾಟವಾಗುತ್ತಿದೆ.

ಇನ್ನು ಕೋಲಾರ ಭಾಗದಲ್ಲಿ ಮಾವಿನ ಹಣ್ಣನ್ನ ಕೇಳೋರಿಲ್ಲದೆ  ರೈತರು ಬೀದಿಗೆ ಸುರಿದಿದ್ದಾರೆ. ಅಧಿಕ ಇಳುವರಿಯಿಂದ ಮಾರುಕಟ್ಟೆಗೆ  ಹೆಚ್ಚಿನ ಮಾವಿನ ಹಣ್ಣುಗಳು ಪೂರೈಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಹಜವಾಗಿ ದರ‌ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗದೆ ರೈತರು ಕಂಗಾಲಾದರೇ ಇತ್ತ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಖುಷಿಯಾಗಿದೆ.

ನೇರಳೆ ಹಣ್ಣಿನ ದರ ಕೊಂಚ ಏರಿಕೆ

ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಆರಂಭದಲ್ಲಿ ಗ್ರಾಹಕರಿಗೆ ಕೊಂಚ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆ.ಜಿಗೆ 200 ರಿಂದ 250 ರೂ ನಿಗದಿ ಮಾಡಲಾಗಿದ್ದು, ಸೀಜನಲ್ ಫ್ರೂಟ್ ಆದ ಕಾರಣ ನೇರಳೆ ಹಣ್ಣಿಗೆ ಬಹುಬೇಡಿಕೆ ಉಂಟಾಗಿದೆ.

ದೇವರಾಜ ಮಾರುಕಟ್ಟೆಯಲ್ಲೇ ಕೆ.ಜಿ 200 ರೂ ನಿಗದಿಪಡಿಸಲಾಗಿದ್ದು ವ್ಯಾಪಾರಸ್ಥರು ಗ್ರಾಮೀಣ ಭಾಗದಿಂದ ಸಂಗ್ರಹಿಸಿ ತಂದು ಮಾರಾಟ ಮಾಡುತ್ತಿದ್ದಾರೆ.  ನೇರಳೆ ಹಣ್ಣಿನ ದರ ಕೇಳಿ ಗ್ರಾಹಕರು ಹಣ್ಣು ಖರೀದಿ ಕೊಂಚ ಹಿಂದೇಟು ಹಾಕುತ್ತಿದ್ದು, 1 ಕೆಜಿ ಬದಲು  ಅರ್ಧ ಕೆ.ಜಿ ಖರೀದಿ ಮಾಡುತ್ತಿದ್ದಾರೆ

ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆ ಬದಿಗಳಲ್ಲಿ ನೇರಳೆ ಹಣ್ಣಿನ ಭರ್ಜರಿ ಮಾರಾಟವಾಗುತ್ತಿದ್ದು, ಉತ್ತಮ ವ್ಯಾಪಾರವಾಗುತ್ತಿರುವ ಹಿನ್ನೆಲೆಯಲ್ಲಿ  ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ವರ್ಷಕ್ಕೊಮ್ಮೆ ಬರುವ ನೇರಳೆ ಹಣ್ಣು ದೇಹದ ಆರೋಗ್ಯಕ್ಕೂ ಒಳ್ಳೆಯದ್ದು.vtu

Key words: Mango prices, fallen, Mysore, purple fruit, Rise

The post ಮೈಸೂರಿನಲ್ಲೂ ಕುಸಿದ ಮಾವು ಬೆಲೆ: ಏರಿದ ‘ನೇರಳೆ ಹಣ್ಣಿನ ದರ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಕೃತಿ ಮಡಿಲಲ್ಲಿ ಚಿಕಿತ್ಸೆ:  AIISH ನಲ್ಲಿ ಮಕ್ಕಳ ಕನಸುಗಳಿಗೆ ಹೂವಿನ ದಾರಿ.

  ಮೈಸೂರು: ಮೈಸೂರಿನ ಸುಂದರ ಬೆಳಿಗ್ಗೆಯಲ್ಲಿ, All India Institute of Speech...

ಇರಾನ್-ಇಸ್ರೇಲ್ ಸಂಘರ್ಷ: ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು,ಮಾರ್ಚ್,7,2026 (www.justkannada.in):  ಇರಾನ್ ಮೇಲೆ ಇಸ್ರೇಲ್,  ಅಮೆರಿಕಾ ಮತ್ತು ದಾಳಿ ನಡೆಸಿದ್ದು...

ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ- ಸಿಎಂ ಸಿದ್ದರಾಮಯ್ಯ

ಮೈಸೂರು, ಮಾರ್ಚ್,7,2026 (www.justkannada.in):  ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಸಮಾಜದ...

ಸಿಎಂ ಸಿದ್ದರಾಮಯ್ಯ ಅವರ ಸೌಜನ್ಯದ ನಡೆ: ದಿ. ಗೋಪಾಲಗೌಡರ ಪುತ್ರ ರಾಮಮನೋಹರ್ ಧನ್ಯವಾದ.

  ಬೆಂಗಳೂರು, ಮಾ.೦೭,೨೦೨೬ : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಡುವುದಾಗಿ...