5
May, 2026

A News 365Times Venture

5
Tuesday
May, 2026

A News 365Times Venture

ಮೈಸೂರು: ಮೇ 8ರಿಂದ ಚರಕದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ

Date:

ಮೈಸೂರು,ಮೇ,4,2026 (www.justkannada.in): ಇಲ್ಲಿನ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯಲ್ಲಿನ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯಲ್ಲಿ ಮೇ 8ರಿಂದ 10ರ ವರೆಗೆ ಸಾಗರ ಸಮೀಪದ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜೊತೆಗೆ ಕೊಂಡುಕೊಳ್ಳುವವರ ಸಮಾವೇಶ ಆಯೋಜಿಸಿದೆ.

ಮೇ 8ರಂದು ಮಧ್ಯಾಹ್ನ 12 ಗಂಟೆಗೆ ಮೇಳಕ್ಕೆ ಸುತ್ತೂರು ಶ್ರೀವೀರ ಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ಅತಿಥಿಗಳಾಗಿ ಮೈಸೂರು ಬುಕ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕಿ ಶುಭಾ ಸಂಜಯ್ ಅರಸ್ ಭಾಗವಹಿಸುವರು. ಚರಕದ ಸಂಸ್ಥಾಪಕರಾದ ರಂಗಕರ್ಮಿ ಪ್ರಸನ್ನ ಉಪಸ್ಥಿತರಿರುವರು.

ಸಮಾರಂಭದಲ್ಲಿ ಮಠಾಧೀಶರು ತೊಡುವ ಕಷಾಯವಸ್ತ್ರ ಬಿಡುಗಡೆ, ಬೇವು ಮತ್ತು ಅರಿಸಿನ ಬಣ್ಣದಲ್ಲಿನ ಸಿದ್ಧ ಉಡುಪುಗಳು ಅನಾವರಣಗೊಳ್ಳಲಿವೆ. ಮೇಳದಲ್ಲಿ ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧ ಉಡುಪುಗಳು ಇರಲಿವೆ. ಉತ್ತರ ಕರ್ನಾಟಕದ ಕೈಮಗ್ಗದ ಸೀರೆಗಳು, ನೈಸರ್ಗಿಕ ಬಣ್ಣದ ಬೆಡ್ ಸ್ಪ್ರೆಡ್ ದೊರೆಯಲಿವೆ. ಜಮ್ದಾನಿ ಸೀರೆ, ಕುರ್ತಾ, ಶರ್ಟ್ ಹಾಗೂ ಗೃಹಾಲಂಕಾರ ಉಡುಪುಗಳು ಸಿಗಲಿವೆ.

ಮೇಳವು ಮೂರು ದಿನಗಳವರೆಗೆ ಬೆಳಿಗ್ಗೆ 10.30ರಿಂದ ರಾತ್ರಿ 7.30ರ ವರೆಗೆ ನಡೆಯಲಿದೆ. ಈ ಮೇಳವನ್ನು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಪವಿತ್ರವಸ್ತ್ರ ಯೋಜನೆಯಡಿ ಆಯೋಜಿಸಲಾಗಿದೆ. ಮಾಹಿತಿಗೆ 63638 85215/74111 20862 ಸಂಪರ್ಕಿಸಬಹುದು.

ENGLISH SUMMARY…

Mysuru: A handloom exhibition and sale by Charaka Women’s Multi-purpose Industrial Cooperative Society, founded by theatre personality Prasanna, will be held from May 8 to 10 at Jagannath Centre for Art & Culture, Vijayanagar.

The fair will showcase natural-dyed pure cotton handloom products, including sarees from North Karnataka, jamdani sarees, kurtas, shirts, bedspreads, and home décor items.

The event will be inaugurated on May 8 at 12 PM by Sri Shivarathri Deshikendra Swamiji of Suttur Mutt. Shubha Sanjay Urs, founder of Mysore Book Club Charitable Trust, will attend as chief guest.

The exhibition will be open daily from 10:30 AM to 7:30 PM. Visitors can also explore special collections like saffron robes and neem- and turmeric-dyed garments.

The event is organized under the State Handloom & Textiles Department’s “Pavitra Vastra” scheme.

Key words: Mysore, Exhibition, sale, handloom, products, May 8th

The post ಮೈಸೂರು: ಮೇ 8ರಿಂದ ಚರಕದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯಭೇರಿ

ದಾವಣಗೆರೆ,ಮೇ,4,2026 (www.justkannada.in): ಬಹಳ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ...

ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ  20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ

ಮೈಸೂರು,ಮೇ,4,2026 (www.justkannada.in): ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮೈಸೂರಿನಲ್ಲಿ 20ಕ್ಕೂ ಹೆಚ್ಚು ಥೀಮ್ಡ್...

ಅಂಚೆ ಮತ ಮರು ಎಣಿಕೆ : ಶಾಸಕ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿಯ ಡಿ.ಎನ್‌ ಜೀವರಾಜ್

ಚಿಕ್ಕಮಗಳೂರು,ಮೇ,4,2026 (www.justkannada.in):  ಹೈಕೋರ್ಟ್‌ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ...

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ ಒತ್ತು...