ಬೆಂಗಳೂರು,ಅಕ್ಟೋಬರ್,3,2026 (www.justkannada.in): ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು ಹೀಗಾಗಿ ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ಭೀಕರ ಬರಗಾಲ ಹಿನ್ನೆಲೆ ತುರ್ತಾಗಿ ಪ್ರಧಾನಿ ಮಧ್ಯಪ್ರವೇಶಿಸಬೇಕು. ಸೆಪ್ಟಂಬರ್ ವೇಳೆಗೆ ರಾಜ್ಯದಲ್ಲಿ ಶೇ 58 ರಷ್ಟು ಮಳೆ ಕೊರೆತೆಯಾಗಿದೆ. ವ್ಯಾಪಕ ಬೆಳೆ ನಷ್ಟವಾಗಿದೆ. ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಅಂದಾಜು 18,748.23 ಕೋಟಿ ರೂ ನಷ್ಟ ಹಿನ್ನೆಲೆ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಚೌಕಟ್ಟಿನಡಿ ಕರ್ನಾಟಕವು 3,705 ಕೋಟಿ ರೂ ಪರಿಹಾರ ಕೇಳಿದೆ. ಅರ್ಹತೆಯಾಧಾರದ ಮೇಲೆ ಅಗತ್ಯ ನೆರವು ನೀಡಬೇಕು. ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
Key words: Severe drought, state, Mallikarjuna Kharge, PM, release, funds.




