ಮೈಸೂರು,ಅಕ್ಟೋಬರ್,3,2026 (www.justkannada.in): ಇ-ಖಾತಾ ಯುಎಲ್‌ಎಂಎಸ್ (ULMS)ನಲ್ಲಿ ಕಟ್ಟಡ ನಕ್ಷೆ ಪಡೆಯಲು ಮತ್ತು ಕಟ್ಟಡ ಪೂರ್ಣಗೊಂಡ ವರದಿ (ಸಿ.ಆರ್) ವಿಳಂಬತೆ ಬಗ್ಗೆ ಅಕ್ಟೋಬರ್ 6 ರಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು, ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ಎಲ್ಲಾ 09 ವಲಯ ಕಚೇರಿಗಳಲ್ಲಿ ಸಾರ್ವಜನಿಕರು ಈ ಮೊದಲು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದು, ಈವರೆಗೂ ಇ-ಖಾತಾ ಪಡೆಯಲು ಸಾಧ್ಯವಾಗದಿರುವ ವಿಳಂಬ ಪ್ರಕರಣಗಳು ಹಾಗೂ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ/ಸಿ.ಆರ್ ಪಡೆಯುವುದಕ್ಕೆ’ ಸಂಬಂಧಿಸಿದಂತೆ ಯು.ಎಲ್.ಎಂ.ಎಸ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಈವರೆಗೂ ವಿವಿಧ ಕಾರಣಗಳಿಗೆ ಕಟ್ಟಡ ನಕ್ಷೆ / ಸಿ.ಆರ್ (Completion Report) ಮಂಜೂರಾತಿ ಆಗದೇ ವಿಳಂಬವಾಗಿರುವ ಪ್ರಕರಣಗಳನ್ನು ಏಕಕಾಲದಲ್ಲಿ, ಪರಿಹರಿಸಲು ಮತ್ತು ಈ ಸಂಬಂಧ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದಿನಾಂಕ 06-10-2026 ರಂದು ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ-11.00 ಗಂಟೆಗೆ ಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಮತ್ತು ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಮೈಸೂರು ಇವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಅಹವಾಲು ಪಡೆಯಲು ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ಹಾಗೆಯೇ ಇ-ಖಾತಾ, ಯುಎಲ್‌ಎಂಎಸ್ (ULMS) ಪೋರ್ಟಲ್‌ನಲ್ಲಿ ಕಟ್ಟಡ ನಕ್ಷೆ & ಕಟ್ಟಡ ಪೂರ್ಣಗೊಂಡ ವರದಿ (ಸಿಆರ್) ಪಡೆಯಲು ಈಗಾಗಲೇ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ಎಲ್ಲಾ 9 ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ವಿಳಂಬ ಆಗಿರುವ ಪ್ರಕರಣಗಳನ್ನು ಮಾತ್ರ ಈ ಸಭೆಯಲ್ಲಿ ಪರಿಶೀಲಿಸಲಾಗುವುದು.
ಜೊತೆಗೆ ಸಾರ್ವಜನಿಕರು ಈಗಾಗಲೇ ಅಗತ್ಯ ಪೂರಕ ದಾಖಲೆಗೋಂದಿಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಅಂದು ಪರಿಶೀಲಿಸಲಾಗುವುದು. ಸಾರ್ವಜನಿಕರು ಈ ಸಭೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
Key words: Public, grievance, meeting, Mysuru City Corporation, October 6




