3
October, 2026

A News 365Times Venture

3
Saturday
October, 2026

A News 365Times Venture

ರಾಜ್ಯದಲ್ಲಿ ಭೀಕರ ಬರಗಾಲ: ತುರ್ತಾಗಿ ಅನುದಾನ ಬಿಡುಗಡೆ ಮಾಡಿ- ಪ್ರಧಾನಿಗೆ ಖರ್ಗೆ ಪತ್ರ

Date:

ಬೆಂಗಳೂರು,ಅಕ್ಟೋಬರ್,3,2026 (www.justkannada.in):   ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು ಹೀಗಾಗಿ ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ,  ಕರ್ನಾಟಕದಲ್ಲಿ ಭೀಕರ ಬರಗಾಲ ಹಿನ್ನೆಲೆ ತುರ್ತಾಗಿ  ಪ್ರಧಾನಿ ಮಧ್ಯಪ್ರವೇಶಿಸಬೇಕು. ಸೆಪ್ಟಂಬರ್  ವೇಳೆಗೆ ರಾಜ್ಯದಲ್ಲಿ ಶೇ 58 ರಷ್ಟು ಮಳೆ ಕೊರೆತೆಯಾಗಿದೆ.  ವ್ಯಾಪಕ ಬೆಳೆ ನಷ್ಟವಾಗಿದೆ.  ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಅಂದಾಜು 18,748.23 ಕೋಟಿ ರೂ ನಷ್ಟ ಹಿನ್ನೆಲೆ ಎನ್ ಡಿಆರ್ ಎಫ್  ಮತ್ತು ಎಸ್ ಡಿಆರ್ ಎಫ್ ಚೌಕಟ್ಟಿನಡಿ ಕರ್ನಾಟಕವು 3,705 ಕೋಟಿ ರೂ  ಪರಿಹಾರ ಕೇಳಿದೆ. ಅರ್ಹತೆಯಾಧಾರದ ಮೇಲೆ ಅಗತ್ಯ ನೆರವು ನೀಡಬೇಕು.  ತುರ್ತಾಗಿ ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

Key words: Severe drought, state, Mallikarjuna Kharge, PM, release, funds.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಿತ್ರಸಂತೆಗೆ ಚಾಲನೆ : ವಿವಿಧ ಕಲಾಕೃತಿಗಳನ್ನ ವೀಕ್ಷಿಸಿ ಶ್ಲಾಘಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್,2,2026 (www.justkannada.in): ಎರಡು ದಿನಗಳ ಕಾಲ ಮಾನಸಗಂಗೋತ್ರಿಯ ಕ್ಲಾಕ್ ಟವರ್...

ಮತದಾರರ ಪಟ್ಟಿ ಮರು ಪರಿಶೀಲನೆಗೆ ಸೂಚನೆ; ಇದು ದೇಶದ ಮತದಾರರ ಹಕ್ಕಿಗೆ ಸಂದ ಜಯ: ಸಿಎಂ ಡಿಕೆಶಿ

ಬೆಂಗಳೂರು, ಅಕ್ಟೋಬರ್,2,2026 (www.justkannada.in): ವಿಶೇಷ ಅಭಿಯಾನದ ಮೂಲಕ ಎಸ್‌ ಐಆರ್‌ ನಂತರದ...

ಮೈಸೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ರದ್ದಿಗೆ ಆಗ್ರಹಿಸಿ ಪ್ರತಿಭಟನೆ; ಅಡ್ಡಂಡ ಕಾರ್ಯಪ್ಪ ಪೋಸ್ಟರ್‌ಗೆ ಬೆಂಕಿ

ಮೈಸೂರು, ಅಕ್ಟೋಬರ್,2,2026 (www.justkannada.in):  ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಆಯೋಜಿಸಲಾಗಿರುವ ‘ಗಾಂಧಿ...

ಸಕಲ ಸಿದ್ಧತೆಗಳೊಂದಿಗೆ ದಸರಾಗೆ ಕಂಬಳ ಸಜ್ಜು – ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು ಅಕ್ಟೋಬರ್, 2,2026 (www.justkannada.in): ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ...