9
July, 2026

A News 365Times Venture

9
Thursday
July, 2026

A News 365Times Venture

ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ

Date:

ಬೆಂಗಳೂರು,ಜುಲೈ,6,2026 (www.justkannada.in):  ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಖಾತೆ ಬದಲಾಯಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಗೆ ನೈಜ ಹೋರಾಟಗಾರರ ವೇದಿಕೆಯಿಂದ ಪತ್ರ ಬರೆಯಲಾಗಿದೆ.

ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಪತ್ರ ಬರೆದಿರುವ ಹೆಚ್ ಎಂ ವೆಂಕಟೇಶ್, ಯತೀಂದ್ರ ಸಿದ್ದರಾಮಯ್ಯ ಕುಟುಂಬ ವಿರುದ್ದ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಇದೆ. ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೇಸ್ ಇದೆ. ಹೈಕೋರ್ಟ್ ನಲ್ಲಿ ರಿಟ್,  ಇಡಿ ಕೂಡ ಪ್ರಕರಣ ದಾಖಲಿಸಿಕೊಂಡಿದೆ.  ಮುಡಾ ಕೇಸ್ ನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ತಂದೆ ತಾಯಿ ಆರೋಪಿತರು.  ಈ ಕೇಸ್ ವಿಚಾರಣೆಯಲ್ಲಿರುವಾಗ ನಗರಾಭಿವೃದ್ದಿ ಖಾತೆ ಸರಿಯಲ್ಲ ತಕ್ಷಣ ಜಾರಿಗೆ ಬರುವಂತೆ ನಗರಾಭಿವೃದ್ದಿ ಖಾತೆ ಯಿಂದ ಬಿಡುಗಡೆಗೊಳಿಸಿ ಬದಲಿ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ.

ತಂದೆ ತಾಯಿ ರಕ್ಷಣೆಗಾಗಿ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟುತ್ತದೆ. ಆರೋಪಿತರ ಮಗ ನಗರಾಭಿವೃದ್ದಿ ಖಾತೆಯ ಅಧಿಕಾರ ಸ್ಥಾನದಿಂದ ದೂರ ಸರಿಯಬೇಕು. ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗಳು ನಡೆಸಬೇಕಾಗುತ್ತದೆ.  ಆರೋಪಿತನ ಮಗನೇ ನಗರಾಭಿವೃದ್ಧಿ ಖಾತೆ ಹೊಂದಿದ್ದರೇ ತಪ್ಪಾಗುತ್ತದೆ.   ಹಾಗಾಗಿ ನಗರಾಭಿವೃದ್ದಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಹೆಚ್ ಎಂ ವೆಂಕಟೇಶ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Key words: Letter, change,  Minister post, Yathindra Siddaramaiah,

The post ಸಚಿವ ಯತೀಂದ್ರ ಖಾತೆ ಬದಲಿಸುವಂತೆ ಆಗ್ರಹ: ಸಿಎಂ ಡಿಕೆಶಿಗೆ ಪತ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯಶಸ್ಸಿಗೆ ಶಿಸ್ತು ಮತ್ತು ಅಣುಕು ಪರೀಕ್ಷೆಗಳು ಅತ್ಯಗತ್ಯ: ನಿತೀಶ್ ಪಾಟೀಲ್

ಮೈಸೂರು, ಜುಲೈ,7,2026 (www.justkannada.in): ಅಭ್ಯರ್ಥಿಗಳು ಮನೆಯಲ್ಲಿ ಎಷ್ಟೇ ಓದಿದರೂ ಪರೀಕ್ಷಾ ಕೇಂದ್ರದ...

ರಾಜಕೀಯ ಪ್ರೇರಿತ ದೂರುಗಳಿಗೆ ಚು.ಆಯೋಗ ಬೆಲೆ ಕೊಡಲ್ಲ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,7,2026 (www.justkannada.in): ರಾಜ್ಯ ಸರ್ಕಾರ ಎಸ್ ಐಆರ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ...

ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದ್ರೆ ಕ್ರಮ- ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಕಲಬುರುಗಿ,ಜುಲೈ,7,2026 (www.justkannada.in):  ಬರ ಪರಿಸ್ಥಿತಿ ನಿರ್ವಹಣೆ ನಿರ್ಲಕ್ಷ್ಯ ತೋರಿಸಿದರೇ ಕ್ರಮ ಕೈಗೊಳ್ಳಲಾಗುತ್ತದೆ...

SIR : ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ, ಅರಿವು ಮೂಡಿಸಿ- ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ

ಮೈಸೂರು, ಜುಲೈ 7,2026 (www.justkannada.in):  ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ...