ಚಾಮರಾಜನಗರ, ಮೇ,23,2026 (www.justkannada.in): ಹೆಚ್ ಸಿ ಮಹದೇವಪ್ಪ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ವಿಚಾರ ಸಂಬಂಧ, ಬೀದರ್ ನಿಂದ ಚಾಮರಾಜನಗರವರೆಗೂ ಸಿಎಂ ಎಂದು ಕೂಗುತ್ತಾರೆ. ಕಳೆದ 40 ವರ್ಷಗಳಿಂದ ದಲಿತರು ಧ್ವನಿ ಇಲ್ಲದವರ ಜೊತೆ ಇದ್ದೇನೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸದ್ಯಕ್ಕೆ ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಇದ್ದಾರೆ. ಈಗ ಸಿದ್ದರಾಮಯ್ಯ ಕೂತಿದ್ದಾರೆ. ಹೀಗಾಗಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ತಿಳಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಉಗ್ರವಾದದ ವಿರುದ್ದ ಹೋರಾಡಿದರು. ಉಗ್ರವಾದದ ವಿರುದ್ದ ಹೋರಾಡಿ ತಮ್ಮ ಪ್ರಾಣವನ್ನೇ ಬಲಿಕೊಟ್ಟರು. ಮೋದಿ ಸೇರಿದಂತೆ ಬಿಜೆಪಿಯವರು ಉಗ್ರರ ವಿರುದ್ದ ಮಾತನಾಡುತ್ತಾರೆ ಅಷ್ಟೆ. ಪ್ರಧಾನಿ ಆಗಿದ್ದ ವಾಜಪೇಯಿಗೆ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯಿತ್ತು. ಈಗ ಇವರು ಭಾವನಾತ್ಮಕ ಸೂಕ್ಷ್ಮ ವಿಚಾರ ಇಟ್ಟುಕೊಂಢು ರಾಜಕಾರಣ ಮಾಡಿದರು. ವಿದೇಶದಿಂದ ಕಪ್ಪು ಹಣ ತರುವುದು, 2 ಕೋಟಿ ಉದ್ಯೋಗ ಸೃಷ್ಠಿ ಎಂದು 2014ರ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆ ಏನಾಯ್ತು ಮೋದಿ ಆರ್ಥಿಕ ತಜ್ಞರ ಸಲಹೆ ಪಡೆಯದೇ ಬೇಜವಾಬ್ದಾರಿ ತೋರಿದರು ಎಂದು ವಾಗ್ದಾಳಿ ನಡೆಸಿದರು.
Key words: CM post, Minister, Mahadevappa, aspirant
The post ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ- ಪರೋಕ್ಷವಾಗಿ ತಾನೂ ಸಿಎಂ ಸ್ಥಾನದ ಆಕಾಂಕ್ಷಿಎಂದ್ರಾ ಸಚಿವ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




