15
September, 2026

A News 365Times Venture

15
Tuesday
September, 2026

A News 365Times Venture

ಹಬ್ಬ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು

Date:

ಮಂಡ್ಯ,ಸೆಪ್ಟಂಬರ್,15,2026 (www.justkannada.in):  ಗಣೇಶ ಹಬ್ಬ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ  ಗಂಡ ಹೆಂಡತಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

ಕೊಪ್ಪ ನಿವಾಸಿಗಳಾದ ಪತಿ ಮುತ್ತುರಾಜ್(35) ಪತ್ನಿ  ಕಾವ್ಯ(30), ಕೀರ್ತನ (8) ಮೃತಪಟ್ಟವರು. ಓರ್ವ ಮಗಳು ಭುವನ ಅಪಘಾತದಲ್ಲಿ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಮುತ್ತುರಾಜ್ ಕುಟುಂಬ ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಹಬ್ಬ ಮುಗಿಸಿ ಬೆಳಗ್ಗಿನ ನಸುಕಿನ ಜಾವ ಬೈಕ್ ನಲ್ಲಿ ನಾಳ್ವರು ತೆರಳುತ್ತಿದ್ದ ವೇಳೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Accident, bike, Three members, same family, die.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಂದೇ ಮಾತರಂ ಚರಣ ಕಡಿತ ಖಂಡಿಸಿ ಸೆ.15ರಿಂದ ಪಾದಯಾತ್ರೆ- ಡಾ.ಈ.ಸಿ.ನಿಂಗರಾಜ್ ಗೌಡ

ಮೈಸೂರು,ಸೆಪ್ಟಂಬರ್, 15,2026 (www.justkannada.in): ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಕೇವಲ...

ದೇಶದ ಜನತೆಗೆ ಗೌರಿ ಗಣೇಶ ಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,14,2026 (www.justkannada.in): ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮವಾಗಿದ್ದು ಈ...

ಟಿ.ನರಸೀಪುರ ಇನ್ಸ್ ಪೆಕ್ಟರ್ ವಾರ್ನಿಂಗ್ ವಿಚಾರ: ಸಮರ್ಥಿಸಿಕೊಂಡ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಸೆಪ್ಟಂಬರ್,14,2026 (www.justkannada.in):  ಮಸೀದಿಗಳ ಮುಂದೆ ಗಣೇಶ ಮೂರ್ತಿ ಮೆರವಣಿಗೆ  ಹೋಗದಂತೆ ಪಟಾಕಿ...

ಸಿಎಂಗಿಂತ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸುಪ್ರೀಂ – ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್,14,2026 (www.justkannada.in):  ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು...