ಬೆಂಗಳೂರು,ಜೂನ್,6,2025 (www.justkannada.in): ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದಕ್ಕೆ ಸರ್ಕಾರವೇ ಕಾರಣ. ಅಂಧ ಸಿಎಂ, ಅಂಧ ದರ್ಬಾರ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಜೆಡಿಎಸ್ ಬಿಜೆಪಿ ನಾಯಕರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದ್ದರು.
ಈ ವೇಳೆ ಮಾತನಾಡಿದ ಆರ್.ಅಶೋಕ್, ಐಪಿಎಲ್ ಕಪ್ ಗೆದ್ದಿದ್ದು ಆರ್ ಸಿಬಿ ತಂಡ. ಆದರೆ ಫೋಟೊಗೆ ಫೋಸ್ ನೀಡಿದ್ದು ಕೆಪಿಸಿಸಿ ತಂಡ . ಇವರು ಕುರುಡು ಮುಖ್ಯಮಂತ್ರಿ. ಇಲ್ಲಿ ಸರ್ಕಾರ ಅಪರಾಧಿ. ತಪ್ಪಿತಸ್ಥರು ಸರ್ಕಾರ. ಪೊಲೀಸರನನ್ನ ಹರಕೆಯ ಕುರಿಯನ್ನಾಗಿಸಿದಿರಿ. ಮೊಸರನ್ನು ನೀವು ತಿಂದು ಪೊಲೀಸರ ಮೂತಿಗೆ ಒರೆಸಿದ್ರಿ ಸಿಎಂ ರನ್ ಔಟ್ ಮಾಡಲು ಡಿಕೆಶಿ ಯತ್ನಿಸುತ್ತಿದ್ದು , ಸಾರ್ವಜನಿಕರು ಪೊಲೀಸರ ಪರ ಇದ್ದಾರೆ ಎಂದರು.
ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ನಾಚಿಕೆ ಬೇಡವಾ? ನಮ್ಮದೇನು ತಪ್ಪಿಲ್ಲ ಅಂತ ಸಿಎಂ ಪ್ರೆಸ್ ಮೀಟ್ ಮಾಡಿದ್ರಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಸಸ್ಪೆಂಡ್ ಆಗಿದ್ದಾರೆ. ರಾಜ್ಯದ ಜನರು ಇಂದು ವಿ ಆರ್ ವಿತ್ ಪೊಲೀಸ್ ಎಂದು ಹೇಳುತ್ತಿದ್ದಾರೆ. ಅನಧಿಕೃತ ಕಾರ್ಯಕ್ರಮ ಎಂದು ನೀವೆ ಎಫ್ ಐಆರ್ ನಲ್ಲಿ ಹೇಳಿದ್ದೀರಾ? ಹಾಗಾದರೆ ಸಿಎಂ ಮನೆಗೆ ಪ್ರಾಂಚೈಸಿ ಅವರನ್ನ ಕರೆದುಕೊಂಡು ಹೋಗಿದ್ದು ಯಾರು. ಕಮಿಷನರ್ ಅನುಮತಿ ಕೊಟ್ಟಿಲ್ಲ ಅಂತಾ ಸಿಎಂಗೆ ಹೇಳಿದವರು ಯಾರು? ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಸಿಎಂ ಹೇಳಿದ್ದಾರೆ. ಆಗಾದರೆ ಸ್ಟೇಡಿಯಂ ಏನು ಕರ್ನಾಕಟದಲ್ಲಿ ಇಲ್ವಾ ಎಂದು ಅಶೋಕ್ ಪ್ರಶ್ನಿಸಿದರು.
Key words: Blind CM, Government, responsible,11 people, deaths,R. Ashok
The post ಅಂಧ ಸಿಎಂ, ಅಂಧ ದರ್ಬಾರ್: 11 ಜನರ ಸಾವಿಗೆ ಸರ್ಕಾರವೇ ಕಾರಣ-ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.