ಬೆಂಗಳೂರು,ಜೂನ್,20,2026 (www.justkannada.in): ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರನ್ನ ಪಕ್ಷ ಬಿಟ್ಟು ಹೋಗಿ ಅಂತಾ ಹೇಳಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಮ್ಮ ಪಕ್ಷದಲ್ಲಿ ನಿಮಗೆ ಭವಿಷಯ ಇಲ್ಲ ಅಂತ ಭಾವಿಸಿದರೇ ಅಂತವರನ್ನು ನಾನೇ ಕಳಿಸಿಕೊಡುತ್ತಿದ್ದೆ. ಅಡ್ಡ ಮತದಾನ ಮಾಡಿದವರನ್ನ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ. ಅಡ್ಡ ಮತದಾನದ ಎಲ್ಲಾ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್ ಗೆ ಹೇಳುತ್ತೇನೆ. ಮೈತ್ರಿಯಲ್ಲಿ ಯಾವುದೇ ಬಿರುಕಾಗಲ್ಲ ಎಂದರು.
ನಿನ್ನೆಯ ಸಭೆಯಲ್ಲಿ 17 ಶಾಸಕರು ಭಾಗಿಯಾಗಿದ್ದಾರೆ, ಇದನ್ನ ಮುಂದುವರೆಸುವುದು ಬೇಡ. ನನ್ನ ಮುಂದಿನ ಗುರಿ ರಾಜ್ಯದಲ್ಲಿ ಸರ್ಕಾರವನ್ನು ತರುವುದು. ಸಿಎಂ ವಿಚಾರ ಅಮೇಲೆ ನಿರ್ಧಾರವಾಗುತ್ತದೆ ಮೊದಲು ಈಗಿನ ಕೆಟ್ಟ ಸರ್ಕಾರ ತೊಲಗಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
Key words: cross vote, leave, party, Union Minister, HDK
The post ಅಡ್ಡ ಮತದಾನ ಮಾಡಿದವರನ್ನ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ- ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




