20
June, 2026

A News 365Times Venture

20
Saturday
June, 2026

A News 365Times Venture

 4 ವರ್ಷಗಳಿಂದ ಬಗೆಹರಿಯದ ಚರಂಡಿ ಸಮಸ್ಯೆ: ನಿವಾಸಿಗಳಿಂದ ಆಕ್ರೋಶ

Date:

ಬೆಂಗಳೂರು,ಜೂನ್,19,2026 (www.justkannada.in): ಬೆಂಗಳೂರು ಪೂರ್ವ ವಲಯದ ಭಟ್ಟರಹಳ್ಳಿ ಸಮೀಪದ ಬನಶಂಕರಿ ಲೇಔಟ್ 6ನೇ ಕ್ರಾಸ್‌ ನಲ್ಲಿ 2022ರಿಂದ ಮುಂದುವರಿದಿರುವ ಚರಂಡಿ ತಡೆ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಮಳೆಗಾಲದ ವೇಳೆ ರಸ್ತೆಗಳಲ್ಲಿ ನೀರು ನಿಂತು ಹಲವು ದಿನಗಳವರೆಗೆ ತೆರವಾಗದೇ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ನಿಂತ ನೀರು ಮನೆಗಳ ಭೂಗತ ನೀರಿನ ಸಂಪ್‌ ಗಳಿಗೆ ನುಗ್ಗಿ ಕುಡಿಯುವ ನೀರು ಕಲುಷಿತಗೊಳ್ಳುವ ಅಪಾಯವೂ ಎದುರಾಗಿದೆ ಎಂದು ನಿವಾಸಿ ವಿವೇಕಾರ್ಜುನ್ ಕೆ.ಎಂ. ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹಿಂದಿನ ಬಿಬಿಎಂಪಿ ಹಾಗೂ ಬಳಿಕ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಶಾಶ್ವತ ಪರಿಹಾರ ದೊರಕಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮುಚ್ಚಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ತಡೆಗೆ ಕಾರಣವಾದ ಮೂಲ ಸಮಸ್ಯೆಯನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿವಾಸಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Key words: Sewerage problem, unresolved, 4 years, Residents, outraged

The post  4 ವರ್ಷಗಳಿಂದ ಬಗೆಹರಿಯದ ಚರಂಡಿ ಸಮಸ್ಯೆ: ನಿವಾಸಿಗಳಿಂದ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.20 ರಂದು ಪಿ.ಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ: ರಾಜ್ಯದ 41.54 ಲಕ್ಷ ರೈತರಿಗೆ ನೆರವು

ಬೆಂಗಳೂರು, ಜೂನ್,19,2026 (www.justkannada.in): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ...

ಅನರ್ಹರಿಗೆ ಗ್ಯಾರಂಟಿ ಹೋಗಬಾರದು: ಹೀಗಾಗಿ ತಾಂತ್ರಿಕ ಕ್ರಮ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,19,2026 (www.justkannada.in): ಮೃತಪಟ್ಟವರಿಗೂ ಗ್ಯಾರಂಟಿ ಯೋಜನೆಯ ಹಣ ಹೋಗುತ್ತಿದೆ ಎಂಬ ವಿಚಾರ...

ನಾನು ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತ: ಅಡ್ಡಮತದಾನ ಮಾಡಿಲ್ಲ- ಶಾಸಕ ಭೈರತಿ ಬಸವರಾಜು

ಬೆಂಗಳೂರು,ಜೂನ್,19,2026 (www.justkannada.in): ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ. ನಾನು ವಿಧಾನ ಪರಿಷತ್...

 ಕೊಳ್ಳೇಗಾಲ: ಕಾರು ಸೇತುವೆಗೆ ಡಿಕ್ಕಿ, ನ್ಯಾಯಾಂಗ ಇಲಾಖೆಯ 2 ಸಿಬ್ಬಂದಿ ಸಾವು, 3 ಗಂಭೀರ ಗಾಯ.

ಕೊಳ್ಳೇಗಾಲ, june.19,2026: ಪಟ್ಟಣದ ಮುಡಿಗುಂಡ ಸಮೀಪದ ಸುವರ್ಣವತಿ ಸೇತುವೆಗೆ ಕಾರು ಡಿಕ್ಕಿ...