ಬೆಂಗಳೂರು,ಜೂನ್,7,2025 (www.justkannada.in): ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ವಿನ್ನರ್ ಮಡೆನೂರು ಮನುಗೆ ಜಾಮೀನು ಸಿಕ್ಕದ್ದು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಮಡೆನೂರು ಮನು ರಿಲೀಸ್ ಆಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಡೆನೂರು ಮನು, ನಿಜ ಹೇಳಬೇಕು ಅಂದ್ರೆ ಒಂದು ರೀತಿ ಸ್ಮಶಾನ, ಬೂದಿಲಿ ಮೂಳೆಯೂ ಸಿಗಬಾರದು ಅನ್ನೋ ಪರಿಸ್ಥಿತಿಯಲ್ಲಿದ್ದೇನೆ. ಈ ಪರಿಸ್ಥಿತಿ ಯಾವ ಶತ್ರುಗಳಿಗೂ ಬರಬಾರದು. ನಾನು ಯಾರಿಗೂ ಕೇಡು ಬಯಸುವುದಿಲ್ಲ, ನಾನು ಯಾರ ಸಹವಾಸಕ್ಕೂ ಹೋದವನಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಎಂದು ಇದ್ದೆ. ಆದರೆ, 32 ವರ್ಷಕ್ಕೆ ಒಂದೊಳ್ಳೆ ಬುದ್ಧಿ ಕಲಿಸಿದ್ದಾರೆ ಎಂದಿದ್ದಾರೆ.
ನನ್ನನ್ನು ಯಾರೆಲ್ಲ ಬೈದಿದ್ದಾರೋ ಅವರೆಲ್ಲರೂ ನಮ್ಮ ಕರ್ನಾಟಕದವರೇ, ತಂದೆ ತಾಯಿ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿದ್ದಾರೆ. ನನ್ನ ಮೇಲೆ ದೂರು ಕೊಟ್ಟವರು ಯಾರು? ಯಾರು ದೂರು ಕೊಡಿಸಿದರು? ಎನ್ನುವುದು ಗೊತ್ತಿಲ್ಲ. ಈಗ ಈ ಕೇಸ್ ವಿಚಾರಣೆ ನಡೆಯುತ್ತಿದೆ. ಇನ್ನೇನು ಚಾರ್ಜ್‌ಶೀಟ್ ಕೂಡ ಹಾಕುತ್ತಾರೆ. ಕೋರ್ಟ್ ಏನು ಹೇಳುತ್ತದೆಯೋ ಅದಕ್ಕೆ ನಾನು ತಲೆಬಾಗುತ್ತೇನೆ ಎಂದಿದ್ದಾರೆ.
Key words: Rape case, Madenuru Manu, released, jail
The post ಅತ್ಯಾಚಾರ ಆರೋಪ ಕೇಸ್: ಜೈಲಿನಿಂದ ಮಡೆನೂರು ಮನು ರಿಲೀಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.