ಮೈಸೂರು,ಜೂನ್,21,2025 (www.justkannada.in): ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2025ನೇ ಸಾಲಿನಲ್ಲಿ ಜರುಗುವ ನಾಲ್ಕು ಆಷಾಡ ಶುಕ್ರವಾರಗಳು ಮತ್ತು ತಾಯಿ ಚಾಮುಂಡೇಶ್ವರಿ ಜನ್ಮೋತ್ಸವದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ.
ಜೂನ್ 27 ಮೊದಲನೇ ಆಷಾಢ ಶುಕ್ರವಾರ ಜುಲೈ 4 ಎರಡನೇ ಆಷಾಢ ಶುಕ್ರವಾರ ಜುಲೈ 11 ಮೂರನೇ ಆಷಾಢ ಶುಕ್ರವಾರ, ಜುಲೈ 17 ಅಮ್ಮನವರ ಜನ್ಮೋತ್ಸವ ಮತ್ತು ಜುಲೈ 18 ನಾಲ್ಕನೇ ಆಷಾಡ ಶುಕ್ರವಾರಗಳಂದು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಭಕ್ತಾಧಿಗಳಿಗೆ ಪ್ಲಾಸ್ಟಿಕ್ ಬಳಕೆ ನಿಷೇದಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Asha Friday, no use, plastic , Chamundi Hills
The post ಅಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.