ನವದೆಹಲಿ ,ಮೇ,10,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7 ರಂದು ಉಗ್ರರ ಕ್ಯಾಂಪ್ ಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಿದ್ದು ಈ ದಾಳಿಯಲ್ಲಿ ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಅಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಉಗ್ರರ ಹೆಸರು ಬಹಿರಂಗವಾಗಿದ್ದು, ಲಷ್ಕರ್-ಎ-ತೈಬಾದ ಮರ್ಕಜ್ ಇನ್ ಚಾರ್ಜ್ ಮುದಸೀರ್, ಜೈಶ್ ಎ ಮೊಹಮ್ಮದ್ ಉಗ್ರ ಹಫೀಜ್ ಮೊಹಮ್ಮದ್ ಜಮೀಲ್, ಬಹಾವಲ್ಪುರ್ ಮರ್ಕಜ್ ಸುಭಾನಲ್ಲಾದ ಇನ್ಚಾರ್ಜ್ ಆಗಿದಂತಹ ಜಮೀಲ್, ಜೈಶ್ ಎ ಮೊಹಮ್ಮದ್ ಉಗ್ರ ಮೊಹಮ್ಮದ್ ಯುಸುಫ್ ಕೂಡ ಹತ್ಯೆಯಾಗಿದ್ದಾನೆ.
ಲಷ್ಕರ್-ಎ-ತೈಬಾ ಸಂಘಟನೆಯ ಉಗ್ರ ಖಾಲಿದ್ ಸಹ ಹತ್ಯೆಯಾಗಿದ್ದಾನೆ. ಇನ್ನು ಮುಧಾಸೀರ್ ಖಾದಿಯಾನ್ ಖಾಸ್ ಅಲಿಯಾಸ್ ಅಬು ಜಿಂದಾಲ್, ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಮೊಹಮ್ಮದ್ ಸಲೀಂ, ಅಬು ಆಕಾಶಾ ಅಲಿಯಾಸ್ ಖಾಲಿದ್ ಆಫೀಸ್, ಮೊಹಮ್ಮದ್ ಜಮೀಲ್ ಹಾಗು ಉಗ್ರ ಮೊಹಮ್ಮದ್ ಹಸನ್ ಖಾನ್ ನನ್ನು ಭಾರತೀಯ ಸೇನೆ ಇದೀಗ ಹತ್ಯೆ ಮಾಡಿದೆ.
Key words: Operation Sindhoora, Five, most wanted, terrorists, killed
The post ಆಪರೇಷನ್ ಸಿಂಧೂರ: ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರು ಬಲಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.