ಮೈಸೂರು,ಜೂನ್,21,2025 (www.justkannada.in): ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 10 ದಿನದ ಬದಲಾಗಿ 11 ದಿನ ಆಚರಿಸಲಾಗುತ್ತದೆ ಎಂಬ ವಿಚಾರ ಸಾಕಷ್ಟು ಸುದ್ದಿಯಾಗಿದ್ದು ಈ ಬಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, 11 ದಿನ ದಸರಾ ಆಚರಣೆ ಇದೇ ಮೊದಲಲ್ಲ. ಈ ಹಿಂದೆಯೂ 11 ದಿನ ದಸರಾ ಆಚರಣೆ ಮಾಡಿದ್ದೇವೆ. 1920, 1929,1953,1963,1980,1990,1998,2000,2015,2016 ರಲ್ಲಿ ಕೂಡ 11 ದಿನ ದಸರಾ ಆಚರಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಲೂನಾರ್ ಕ್ಯಾಲೆಂಡರ್ ಮೂಲ ಪಂಚಾಂಗವನ್ನು ಮೈಸೂರು ಅರಮನೆ ಪಾಲಿಸುತ್ತದೆ. ಹಾಗಾಗಿ ದಸರಾ ಆಚರಣೆಗೆ ಯಾವುದೇ ಅಡಚಣೆ ಏನು ಇಲ್ಲ. ಪಂಚಾಂಗ ಹಾಗೂ ಲೂನಾರ್ ಕ್ಯಾಲೆಂಡರ್ ಆಧರಿಸಿ ದಸರಾ ಆಚರಣೆ ಎಂದಿನಂತೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
Key words: Pramod Devi Wodeyar, 11-day, Dasara celebrations
The post ಈ ಬಾರಿ 11 ದಿನ ದಸರಾ ಆಚರಣೆ ವಿಚಾರ: ಸ್ಪಷ್ಟನೆ ನೀಡಿದ ಪ್ರಮೋದಾ ದೇವಿ ಒಡೆಯರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.