19
July, 2026

A News 365Times Venture

19
Sunday
July, 2026

A News 365Times Venture

‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್

Date:

ಬೆಂಗಳೂರು,ಜೂನ್,13,2026 (www.justkannada.in): ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ವಹಿಸಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, “ನಾನು ಯಾವುದೇ ತನಿಖೆಗೆ ಸಿದ್ಧ” ಎಂದು ಮಾಧ್ಯಮಗಳ ಮುಂದೆ ಹಾರಿಕೆ ಉತ್ತರ ನೀಡುವ ಕಮಿಷನ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರೇ, ಕ್ಯಾಮೆರಾಗಳ ಮುಂದೆ ನಿಮ್ಮ ಈ ‘ಉತ್ತರಕುಮಾರನ ಪೌರುಷ’ ಸಾಕು ಮಾಡಿ. ನಿಮ್ಮಲ್ಲಿ ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ, ಕಸದ ಟೆಂಡರ್‌ನ ಈ ಮಹಾ ಲೂಟಿಯಲ್ಲಿ ನಿಮ್ಮ ಪಾತ್ರವಿಲ್ಲ ಎಂಬ ಧೈರ್ಯ ನಿಮಗಿದ್ದರೆ, ಈ ಕೂಡಲೇ ಪ್ರಕರಣವನ್ನು CBI ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ.

ಘನತ್ಯಾಜ್ಯ ವಿಲೇವಾರಿ ಟೆಂಡರ್ ಹೆಸರಿನಲ್ಲಿ ನಡೆದಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನಾನೇ ಖುದ್ದಾಗಿ ದೂರು ಕೊಡುತ್ತೇನೆ! ಮಾಧ್ಯಮಗಳ ಮುಂದೆ ಕ್ಯಾಮೆರಾ ನೋಡಿ ಬಿಲ್ಡಪ್ ಕೊಡುವುದನ್ನು ಬಿಟ್ಟು, ತನಿಖೆಗೆ ಆದೇಶಿಸುವ ತಾಕತ್ತು ಪ್ರದರ್ಶಿಸಿ. ಕಸದಲ್ಲೂ ಕಮಿಷನ್ ಹೊಡೆದ ಆ ಮಹಾ “ಕಮಿಷನ್ ಏಜೆಂಟ್” ಯಾರು ಎಂಬ ಸತ್ಯ ಹೊರಬರಲಿ. ಕರ್ನಾಟಕದ ಜನತೆಗೆ ಈ ಸರ್ಕಾರದ ಅಸಲಿ ಮುಖ ಏನೆಂದು ತಿಳಿಯಲಿ ಎಂದು ಆರ್.ಅಶೋಕ್  ವಾಗ್ದಾಳಿ ನಡೆಸಿದ್ದಾರೆ.

Key words: garbage, tender, corruption, CBI,  R. Ashok, CM DK Shivakumar

The post ‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣವಾದ್ರೆ ಸಂತೋಷ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಜುಲೈ,18,2026 (www.justkannada.in): ತುಮಕೂರಿನಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಿ ಎಂದು ಬಿಜೆಪಿ...

ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ

ಬೆಂಗಳೂರು,ಜುಲೈ,18,2026 (www.justkannada.in): ಬಿಡದಿ ಟೌನ್‌ ಶಿಪ್‌  ಯೋಜನೆ ವಿರೋಧಿಸಿ  ಬಿಜೆಪಿ-ಜೆಡಿಎಸ್ ಮೈತ್ರಿ...

ಆಂಧ್ರದಲ್ಲಿ ಕೋವಿಡ್:  ಹೈ ಅಲರ್ಟ್ ಘೋಷಣೆ.

ಆಂಧ್ರಪ್ರದೇಶ,ಜುಲೈ,18,2026 (www.justkannada.in): ಕೊನೆಯ ಕೋವಿಡ್ ಅಲೆಯ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ...

ಬಿಡದಿ ಟೌನ್ ಶಿಪ್ ವಿರುದ್ದ ಬಿಜೆಪಿಯವರದ್ದು ಪ್ರಾಯಶ್ಚಿತ ಯಾತ್ರೆ: ಶಾಸಕ ಹೆಚ್. ಸಿ ಬಾಲಕೃಷ್ಣ

ಬೆಂಗಳೂರು, ಜುಲೈ,18,2026 (www.justkannada.in):  ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಬಿಜೆಪಿ...