ಬೆಂಗಳೂರು,ಜೂನ್,27,2025 (www.justkannada.in): ಮಲೇ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಐದು ಹುಲಿಗಳು ಸಾವನ್ನಪ್ಪಿದ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆಗೆ ತಂಡ ರಚಿಸಿದ್ದು ಮೂರು ದಿನಗಳಲ್ಲಿ ವರದಿ ಬರಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಐದು ಹುಲಿಗಳ ಸಾವು ಅತ್ಯಂತ ದುಃಖಕರ ಘಟನೆಯಾಗಿದೆ. ಹುಲಿಗಳ ಸಾವಿನ ಬಗ್ಗೆ ತನಿಖೆಗೆ ಈಗಾಗಲೇ ತಂಡ ರಚಿಸಿದ್ದೇವೆ. ಇನ್ನೂ ಮೂರು ದಿನಗಳಲ್ಲಿ ವರದಿ ಬರಲಿದೆ. ಪ್ರಾಥಮಿಕ ಹಂತದಲ್ಲಿ ಗೊತ್ತಾಗಿರುವಂತೆ ವಿಷಪ್ರಾಸನ ಆಗಿರಬಹುದು. ಸತ್ತ ಹೋದ ಹಸು ಮೇಲೆ ಮೇಲೆ ಯಾರೋ ವಿಷ ಹಾಕಿರಬಹುದು ಅದನ್ನ ಹುಲಿಗಳು ತಿಂದು ಮೃತಪಟ್ಟಿರಬಹುದು ಎಂದರು.
ಹುಲಿಗಳ ಸಾವು ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಹುಲಿ ಸಂರಕ್ಷಣೆಗೆ ಕೇಂದ್ರ ಸಹ ಅನುದಾನ ಬಿಡುಗಡೆ ಮಾಡಬೇಕು. ಸಿಎಂ ಜೊತೆ ಚರ್ಚೆ ಮಾಡಿದ್ದೇನೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
Key words: Five Tigers, Death Case, Serious, Minister, Ishwar Khandre
The post ಐದು ಹುಲಿಗಳ ಸಾವು ಕೇಸ್ ಗಂಭೀರವಾಗಿ ಪರಿಗಣನೆ: ಮೂರು ದಿನಗಳಲ್ಲಿ ವರದಿ- ಸಚಿವ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.