ಚಾಮರಾಜನಗರ,ಜೂನ್,30,2025 (www.justkannada.in): ಮಲೆ ಮಹದೇಶ್ವರ ಬೆಟ್ಟದ ಮೀಣಂ ಅರಣ್ಯವ್ಯಾಪ್ತಿಯಲ್ಲಿ 5 ಹುಲಿಗಳ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಮತ್ತೆ ಅರಣ್ಯ ಇಲಾಖೆ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಕುನ್ನಪ್ಪ, ಮಾದುರಾಜು ಹಾಗೂ ನಾಗರಾಜು ಮೂವರನ್ನ ಮತ್ತೇ ಅರಣ್ಯ ಇಲಾಖೆ ಕಸ್ಟಡಿಗೆ ನೀಡಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ ಆದೇಶಿಸಿದ್ದಾರೆ. ಎರಡು ದಿನದ ನ್ಯಾಯಾಂಗ ಬಂಧನ ಮುಕ್ತಾಯ ಹಿನ್ನೆಲೆ ಇಂದು ಮೂವರು ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂಬ ಅರಣ್ಯ ಇಲಾಖೆ ಮನವಿ ಪುರಸ್ಕರಿಸಿದ ನ್ಯಾಯಾಲಯ ಜುಲೈ 3ರ ಮಧ್ಯಾಹ್ನ 2ರ ತನಕ ಅರಣ್ಯ ಇಲಾಖೆ ಕಸ್ಟಡಿಗೆ ನೀಡಿದ ಆದೇಶಿಸಿದ್ದಾರೆ. ಆರೋಪಿಗಳ ಪರ ವಕೀಲ ಮಹಾದೇವ ಪ್ರಸಾದ್ ವಕಾಲತು ಅರ್ಜಿ ಸಲ್ಲಿಸಿದರು.
Key words: Five Tigers, Death Case, Three, accused, Court
The post ಐದು ಹುಲಿಗಳ ಸಾವು ಕೇಸ್: ಮೂವರು ಆರೋಪಿಗಳು ಮತ್ತೆ ಅರಣ್ಯ ಇಲಾಖೆ ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.