ಬೆಂಗಳೂರು,ಜೂನ್,27,2025 (www.justkannada.in): ಮಲೈ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬದಲಾವಣೆ ಆಗುತ್ತೆ ಅಂತಾ ಹೇಳಿದ್ದಾರೆ. ಇಂತಹದ್ದೇ ಬದಲಾವಣೆ ಅಂತಾ ಹೇಳಿಲ್ಲ. ಸಣ್ಣಪುಟ್ಟ ಬದಲಾವಣೆ ಆಗುತ್ತೆ ಅಂತಾ ಹೇಳಿದ್ದಾರೆ ಅಷ್ಟೇ. ಅದನ್ನ ನೀವು ಹೇಗೆ ಬೇಕೋ ಹಾಗೆ ಬರೆದುಕೊಂಡರೆ ಹೇಗೆ ? ಐ ಆಮ್ ನಾಟ್ ಎ ಜರ್ನಲಿಸ್ಟ್ ಎಂದರು.
ಮಾಧ್ಯಮಗಳ ವಿರುದ್ದ ಗರಂ
ಸುರ್ಜೇವಾಲಾ ಬೆಂಗಳೂರಿಗೆ ಬರುತ್ತಿರುವುದು ಹೌದು. ಹಾಗಂತ ಪಕ್ಷದಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಬರ್ತಿದಾರೆ ಅಂದ್ರೆ ಹೇಗೆ ?ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇದೆ ಅಂತಾ ನಿಮಗೆ ಯಾರು ಹೇಳಿದ್ದು ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧ ಗರಂ ಆದರು.
Key words: Death, five, tigers, Action, report, CM, Siddaramaiah
The post ಐದು ಹುಲಿಗಳ ಸಾವು: ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.