20
May, 2026

A News 365Times Venture

20
Wednesday
May, 2026

A News 365Times Venture

ಕದನ ವಿರಾಮ: ಕೇಂದ್ರದ ತೀರ್ಮಾನಕ್ಕೆ ನಾವು ಬದ್ದ –ಸಿಎಂ ಸಿದ್ದರಾಮಯ್ಯ

Date:

ಮೈಸೂರು,ಮೇ,10,2025 (www.justkannada.in): ಭಾರತ – ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ವಿಚಾರ ಸಂಬಂಧ ಕೇಂದ್ರದ ತೀರ್ಮಾನಕ್ಕೆ ನಾವು ಬದ್ದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎರಡು ದೇಶಗಳ ಡಿಜಿಎಂಗಳು ಇಂದು ಸಭೆ ಮಾಡುತ್ತಿದ್ದಾರೆ. ಸಭೆಯಲ್ಲಿ ಏನು ತೀರ್ಮಾನ ಮಾಡುತ್ತಾರೆ ಮಾಡಲಿ. ಕೇಂದ್ರದ ತೀರ್ಮಾನಕ್ಕೆ ನಾವು ಬದ್ದ ಎಂದಿದ್ದಾರೆ.

ಕದನ ವಿರಾಮ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ , ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸದ್ಯಕ್ಕೆ ಕದನ ವಿರಾಮ ಘೋಷಣೆ ಆಗಿದೆ . ಅದನ್ನು ಸ್ವಾಗತ ಮಾಡಿದ್ದೇನೆ. ಯುದ್ದದ ಬಗ್ಗೆ ನಾನೇನೂ ಮಾತನಾಡಲ್ಲ ಎಂದರು.

ಸರ್ವಪಕ್ಷ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು.

ಇಂದಿರಾ ಗಾಂಧಿ ರೀತಿ ಯುದ್ಧ ಮಾಡಬೇಕು ಎಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇಂದಿರಾ ಗಾಂಧಿ ಸಮಯದ ಯುದ್ಧ ಆಗಿ ತುಂಬಾ ವರ್ಷಗಳೇ ಆಗಿವೆ. ಸದ್ಯಕ್ಕೆ ಈಗ ನಾನು ಆ ಬಗ್ಗೆ ಏನು ಹೇಳಲ್ಲ. ಸರ್ವಪಕ್ಷ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು ಎಂದರು.

Key words: Ceasefire,  Central Government, decision, CM Siddaramaiah

The post ಕದನ ವಿರಾಮ: ಕೇಂದ್ರದ ತೀರ್ಮಾನಕ್ಕೆ ನಾವು ಬದ್ದ –ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದುಬಾರೆಯಲ್ಲಿ ಕಂಜನ್ ಆನೆ ದಾಳಿ: “ಆನೆಗಳ ಸ್ವಭಾವ ಊಹಿಸಲು ಸಾಧ್ಯವಿಲ್ಲ” – ವೈದ್ಯ ಡಾ. ನಾಗರಾಜ್

  ಮೈಸೂರು, ಮೇ 19: ದುಬಾರೆ ಆನೆ ಶಿಬಿರದಲ್ಲಿ ಕಂಜನ್ ಆನೆ ದಾಳಿ...

ಅಧಿಕಾರಕ್ಕಾಗಿ ಕಿತ್ತಾಟ: ಸಿಎಂ, ಡಿಸಿಎಂ ವಿರುದ್ದ ಶಾಸಕ ಅಶ್ವಥ್ ನಾರಾಯಣ್ ವ್ಯಂಗ್ಯ

ರಾಮನಗರ,ಮೇ,19,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ...

ಹೈಕಮಾಂಡ್ ಸಿಎಂ, ಡಿಸಿಎಂ ಕರೆಸಿ ಮಾತನಾಡ್ತಾರೆ, ನಮ್ಮನ್ನಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮೇ,19,2026 (www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಈ ಮಧ್ಯೆ ಶಾಸಕರ...

ಮೈಸೂರು ವಿವಿ ಘಟಿಕೋತ್ಸವ ಪ್ರಮಾಣಪತ್ರ ಶುಲ್ಕಕ್ಕೆ ವಿದ್ಯಾರ್ಥಿಗಳ ಪರದಾಟ; ಮೇ 27ರವರೆಗೆ ಅವಧಿ ವಿಸ್ತರಣೆ

  ಮೈಸೂರು, ಮೇ 19,2026: ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಪದವಿ ಪ್ರಮಾಣಪತ್ರ ಶುಲ್ಕ...