10
July, 2025

A News 365Times Venture

10
Thursday
July, 2025

A News 365Times Venture

“ಕನ್ನಡ ಹಾಡು” ಕೇಳಿದ್ದಕ್ಕೂ ಪಹಲ್ಗಾಮ್ ಘಟನೆಗೂ ಏನ್‌ ಸಂಬಂಧ ಮಿಸ್ಟರ್‌ ಸೋನು ನಿಗಮ್..!‌

Date:

ಬೆಂಗಳೂರು,, ಮೇ.೦೧,೨೦೨೫:  ಇತ್ತೀಚೆಗೆ, ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಸಂಜೆ ಕಾರ್ಯಕ್ರಮವೊಂದರಲ್ಲಿ ಯುವ ಸಭಿಕರೊಬ್ಬರು “ ಕನ್ನಡ”  ಹಾಡು ಹಾಡುವಂತೆ ಕೇಳಿದ್ದೆ ಮಹಾಪಾರಾದ ಎಂಬಂತೆ ಗಾಯಕ ಸೋನು ನಿಗಮ್‌ ಪ್ರತಿಕ್ರಿಯಿಸಿರುವುದು ಕನ್ನಡಿಗರನ್ನು ಕೆರಳಿಸಿದೆ.

ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹಾಡಬೇಕೆಂದು ಕೋರಿದ ವಿದ್ಯಾರ್ಥಿಗೆ ಹಿತ ವಚನ ನುಡಿಯುವ ನೆಪದಲ್ಲಿ ಗಾಯಕ ಸೋನು ನಿಗಮ್‌ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ಸ್ಟ ಗ್ರಾಂ ವೀಡಿಯೊದಲ್ಲಿ, ಸೋನು ತನ್ನ ಹಿಂದಿ ಹಿಟ್ ಹಾಡನ್ನು  ಹಾಡುತ್ತಿದ್ದಾಗ, ಯುವಕನೊಬ್ಬ ‘ಕನ್ನಡ, ಕನ್ನಡ’ ಎಂದು ಮನವಿ ಮಾಡಿದ. ಇಷ್ಟಕ್ಕೆ ಕೋಪಗೊಂಡ ಗಾಯಕ ಸೋನು ನಿಗಮ್‌ , ಪ್ರದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿ,

“ನನ್ನ ವೃತ್ತಿಜೀವನದಲ್ಲಿ, ನಾನು ಅನೇಕ ಭಾಷೆಗಳಲ್ಲಿ ಹಾಡಿದ್ದೇನೆ ಆದರೆ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡ ಭಾಷೆಯಲ್ಲಿವೆ. ನಾನು ನಿಮ್ಮ ನಗರಕ್ಕೆ ಬಂದಾಗಲೆಲ್ಲಾ, ನಾನು ಸಾಕಷ್ಟು ಪ್ರೀತಿಯಿಂದ ಬರುತ್ತೇನೆ. ನಾವು ಬಹಳಷ್ಟು ಸ್ಥಳಗಳಲ್ಲಿ ಸಾಕಷ್ಟು ಪ್ರದರ್ಶನಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ಪ್ರದರ್ಶನ ನೀಡಲು ಆಗಮಿಸಿದಾಗಲೆಲ್ಲಾ ನಿಮ್ಮ ಬಗ್ಗೆ ಸಾಕಷ್ಟು ಗೌರವ ಹೊಂದಿರುತ್ತೇನೆ.. ನೀವು ನನ್ನನ್ನು ನಿಮ್ಮ ಕುಟುಂಬದಂತೆ ನೋಡಿಕೊಂಡಿದ್ದೀರಿ, ಆದರೆ ನನ್ನ ವೃತ್ತಿಜೀವನದಷ್ಟು ವಯಸ್ಸಾಗದ ಹುಡುಗ ಕನ್ನಡದಲ್ಲಿ ಹಾಡುವಂತೆ ಬೆದರಿಕೆ ಹಾಕುತ್ತಿರುವುದು ನನಗೆ ಇಷ್ಟವಾಗಲಿಲ್ಲʼ ಎಂದು ಸೋನು ನಿಗಮ್‌ ಅಸಮಧಾನ ವ್ಯಕ್ತಪಡಿಸಿದ.

ಮುಂದುವರಿದು,  ವಿದ್ಯಾರ್ಥಿಯು ಕನ್ನಡ ಕನ್ನಡ ..ಎಂದು ಕೂಗಿದ್ದನ್ನು  ಪಹಲ್ಗಾಮ್ ಘಟನೆಗೆ ಹೋಲಿಸಿದ ಗಾಯಕ ಸೋನು, “ಪಹಲ್ಗಾಮ್ನಲ್ಲಿ ನಡೆದ ಘಟನೆಯ ಹಿಂದಿನ ಕಾರಣ ಇದು. ನಿಮ್ಮ ಮುಂದೆ ಯಾರು ನಿಂತಿದ್ದಾರೆಂದು ದಯವಿಟ್ಟು ನೋಡಿ “ ಎಂದು ನೀಡಿದ ಹೇಳಿಕೆ ಈಗ ಕನ್ನಡಿಗರನ್ನು ಕೆರಳಿಸಿದೆ. ಪಹಲ್ಗಾಮ್‌ ಘಟನೆಗೂ ಕನ್ನಡದಲ್ಲಿ ಹಾಡು ಹಾಡಿ ಎಂದಿದ್ದಕ್ಕೂ ಎಲ್ಲಿಯ ಹೋಲಿಕೆ..? ಸೋನು ನಿಗಮ್‌ ಸ್ಪಷ್ಟಪಡಿಸಲಿ ಎಂದು  ಆಗ್ರಹಿಸಿದ್ದಾರೆ.

key words: “Kannada song”, Pahalgam incident, Sonu Nigam, Bangalore

 

What is the connection between requesting for a “Kannada song” and the Pahalgam incident? Mr. Sonu Nigam.

The post “ಕನ್ನಡ ಹಾಡು” ಕೇಳಿದ್ದಕ್ಕೂ ಪಹಲ್ಗಾಮ್ ಘಟನೆಗೂ ಏನ್‌ ಸಂಬಂಧ ಮಿಸ್ಟರ್‌ ಸೋನು ನಿಗಮ್..!‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ...

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು,ಜುಲೈ,10,2025 (www.justkannada.in):  ಮುಡಾದಲ್ಲಿ ಅಕ್ರಮ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ...

ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ  ಆಸ್ತಿ ಕಬಳಿಸಲು ಸಂಚು...

ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು,ಜುಲೈ,10,2025 (www.justkannada.in):  ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ...