ಬೆಂಗಳೂರು, ಮೇ ,6,2025 (www.justkannada.in): ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮುಂದಾಗಿದ್ದು, ಪಾಕಿಸ್ತಾನದ ವಿರುದ್ದ ಈಗಾಗಲೇ ಹಲವು ಕಠಿಣ ನಿರ್ಧಾರಗಳನ್ನ ಕೈಗೊಂಡಿದೆ. ಇದೀಗ ಭಾರತ ಮತ್ತು ಪಾಕ್ ನಡುವೆ ಯುದ್ದದ ಕಾರ್ಮೋಡ ಕವಿದಿದ್ದು, ಇದಕ್ಕಾಗಿಯೇ ಭಾರತೀಯ ಸೇನೆ ಭರ್ಜರಿ ತಾಲೀಮು ನಡೆಸಿದೆ. ಈ ಮಧ್ಯೆ ಇದೀಗ ಕೇಂದ್ರ ಸರ್ಕಾರ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಆದೇಶಿಸಿದೆ.
ಕೇಂದ್ರ ಗೃಹ ಸಚಿವಾಲಯವು ಮೇ 7 ರಂದು 244 ಜಿಲ್ಲೆಗಳಲ್ಲಿ “ಪರಿಣಾಮಕಾರಿ ನಾಗರಿಕ ರಕ್ಷಣೆ” ಅಣಕು ಅಭ್ಯಾಸಗಳನ್ನು ನಡೆಸಲು ಆದೇಶಿಸಿದೆ. ದೆಹಲಿ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ನಾಳೆ ರಾಷ್ಟ್ರವ್ಯಾಪಿ ಮಾಕ್ ಡ್ರಿಲ್ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ
ಇತ್ತ ಕರ್ನಾಟಕದಲ್ಲಿ ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಮಾಕ್ ಡ್ರಿಲ್ ಗೆ ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬರುತ್ತದೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು, ಕಾರವಾರ, ರಾಯಚೂರಿನಲ್ಲಿ ನಾಳೆ ಸಂಜೆ 4 ಗಂಟೆ ಮಾಕ್ ಡ್ರಿಲ್ ಗೆ ನಿರ್ಧಾರ ಮಾಡಿದ್ದೇವೆ. ಈ ಕುರಿತಾಗಿ ಈಗಾಗಲೇ ಅಗ್ನಿಶಾಮಕದಳ, ಸಿವಿಲ್ ಡಿಫೆನ್ಸ್ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ 35 ಕಡೆ ಸೈರನ್ ಇದ್ದು, 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯ ನಿರ್ವಹಿಸುವ ಕಡೆ ಮಾಕ್ ಡ್ರಿಲ್ ನಡೆಯಲಿದೆ.
Key words: Mock drill, tomorrow, across ,country –
The post ಕರ್ನಾಟಕದ 3 ಜಿಲ್ಲೆಗಳು ಸೇರಿ ದೇಶಾದ್ಯಂತ ನಾಳೆ ಮಾಕ್ ಡ್ರಿಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.