4
May, 2026

A News 365Times Venture

4
Monday
May, 2026

A News 365Times Venture

ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿದ ಜಮ್ಮು ಕಾಶ್ಮೀರ

Date:

ಹುಬ್ಬಳ್ಳಿ,ಫೆಬ್ರವರಿ,28,2026 (www.justkannada.in):  ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಸೋಲಿಸುವ ಮೂಲಕ ಜಮ್ಮುಕಾಶ್ಮೀರ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದಿದೆ.

ರಣಜಿ ಟ್ರೋಫಿ ಫೈನಲ್ ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಇದೇ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್​ ಗೇರಿದ್ದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌  ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಂತರ ಮೊದಲ ಇನ್ನಿಂಗ್ಸ್ ಆಡಲು ಕಣಕ್ಕಿಳಿದ ಕರ್ನಾಟಕ ಕೇವಲ 293 ರನ್‌ ಗಳಿಗೆ ಆಲ್ ಔಟ್ ಆಯಿತು.

ಇತ್ತ ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜಮ್ಮುಕಾಶ್ಮೀರದ ಬ್ಯಾಟ್ಸ್‌ ಮನ್ ​ಗಳು ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆರಂಭಿಕ ಕಮ್ರಾನ್ ಇಕ್ಬಾಲ್ 160 ರನ್‌  ಬಾರಿಸಿದರೇ ಸಾಹಿಲ್ ಕೂಡ ಶತಕ ಗಳಿಸಿ  ಜಮ್ಮುಕಾಶ್ಮೀರ ತಂಡ ಒಟ್ಟು ಮುನ್ನಡೆ 630 ರನ್‌ ಗಳನ್ನು ಮೀರಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು.

ನಿಯಮಗಳ ಪ್ರಕಾರ, ರಣಜಿ ಟ್ರೋಫಿಯಲ್ಲಿ ಪಂದ್ಯ ರದ್ದಾದರೆ, ಮೊದಲ ಇನ್ನಿಂಗ್ಸ್ ಆಧರಿಸಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಂದರೆ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಪಡೆಯುವ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಈ ನಿಯಮದನ್ವಯ ಮೊದಲ ಇನ್ನಿಂಗ್ಸ್​ನಲ್ಲಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು.

ಪಂದ್ಯ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಜಮ್ಮುಕಾಶ್ಮೀರದ ಆಟಗಾರರು ಕುಣಿದು ಕುಪ್ಪಳಿಸಿದರು. ಜಮ್ಮುಕಾಶ್ಮೀರ ಸಿಎಂ ಸಿಎಂ ಓಮರ್ ಅಬ್ದುಲ್ಲಾ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು.

Key words: Jammu and Kashmir, Ranji Trophy, first time,defeating, Karnataka

The post ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿದ ಜಮ್ಮು ಕಾಶ್ಮೀರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆಲುವು: ಮತದಾರರಿಗೆ  ಧನ್ಯವಾದ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮೇ,4,2026 (www.justkannada.in): ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್...

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...