ಬೆಂಗಳೂರು,ಮೇ,2,2026 (www.justkannada.in): ಕಲಬುರಗಿ ಜಿಲ್ಲೆ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರಣಮ್ ಬಿ ಅವರನ್ನು ಸೇರಿ ನಾಲ್ವು ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರಣಮ್ ಬಿ., ಐಎಎಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರನ್ನು ಮುಂದಿನ ಆದೇಶದವರೆಗೆ ಬೆಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್, ಐಎಎಸ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಅವರು ಬೆಂಗಳೂರು ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಡಾ. ಗೋಪಾಲ್ ಕೃಷ್ಣ ಬಿ., ಐಎಎಸ್ (ಕಿ.ನಿ.2018). ಸರ್ಕಾರದ ಉಪ ಕಾರ್ಯದರ್ಶಿ-3, ಹಣಕಾಸು ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಸರ್ಕಾರದ ಉಪ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲಗಳು), ಹಣಕಾಸು ಇಲಾಖೆ, ಬೆಂಗಳೂರು ಉಪ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ರುಚಿ ಬಿಂದಾಲ್, ಐಎಎಸ್ (ಕಿ.ನಿ.2020), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಹಾವೇರಿ ಜಿಲ್ಲೆ, ಹಾವೇರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಸರ್ಕಾರದ ಉಪ ಕಾರ್ಯದರ್ಶಿ-3, ಹಣಕಾಸು ಇಲಾಖೆ ಇಲ್ಲಿಗೆ ರುಚಿ ಬಿಂದಾಲ್ ಅವರನ್ನು ವರ್ಗಾಯಿಸಲಾಗಿದೆ.
Key words: IAS officers, including, Kalaburagi DC, transferred
The post ಕಲಬುರಗಿ ಡಿಸಿ ಸೇರಿ ನಾಲ್ವರು IAS ಅಧಿಕಾರಿಗಳ ವರ್ಗಾವಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




