ಬಳ್ಳಾರಿ,ಜನವರಿ,24,2025 (www.justkannada.in): ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದು ಶಾಸಕ ಜನಾರ್ಧನರೆಡ್ಡಿ ವಿರುದ್ದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದ್ದು ಈ ಕುರಿತು ಸ್ವತಃ ಶ್ರೀರಾಮುಲು ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀರಾಮುಲು, ಕಾಂಗ್ರೆಸ್ಸಿಗರು ನನ್ನನ್ನು ಗೌರವದಿಂದ ಕಂಡಿದ್ದಾರೆ. ನನ್ನನ್ನು ಗೌರವಿಸಿದ ಕಾಂಗ್ರೆಸ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ನಾವು ಒಳ್ಳೆಯವನಾಗಿರುವುದಕ್ಕೆ ನನ್ನ ಮೇಲೆ ಗೌರವವಿಟ್ಟು ಕರೆಯುತ್ತಿದ್ದಾರೆ. ಕಾಂಗ್ರೆಸ್ ನವರು ರಾಜಕೀಯ ಹೊರತುಪಡಿಸಿ, ಅಭಿಮಾನದಿಂದ ಮಾತನಾಡಿದ್ದಾರೆ. ಕಾಂಗ್ರೆಸ್ ನಿಂದ ಆಫರ್ ಬಂದಿರಲಿ, ಬರದಿರಲಿ, ಯಾರೇ ಕರೆದರೂ ಹೋಗಲು ನನ್ನ ಮನಸ್ಥಿತಿ ಇರಬೇಕು. ಬಿಜೆಪಿ ನನ್ನ ತಾಯಿ. ನನಗೆ ಗೌರವ ಕೊಟ್ಟಿರುವ ಕಾಂಗ್ರೆಸ್ ನವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ .
ನಾನು ಬಿಜೆಪಿಯಲ್ಲೇ ಇರುತ್ತೇನೆ. ಮಾಧ್ಯಮದ ಮೂಲಕ ಕಾಂಗ್ರೆಸ್ ನವರು ಬಹಿರಂಗವಾಗಿ ಕರೆಯುತ್ತಿದ್ದಾರೆ. ಏನೇ ಮಾಡಬೇಕಿದ್ದರೂ ನಿಮ್ಮನ್ನೆಲ್ಲಾ ಕೂರಿಸಿಕೊಳ್ಳುತ್ತೇನೆ. ಎಲ್ಲವನ್ನೂ ಓಪನ್ ಆಗಿ ಹೇಳುತ್ತೇನೆ ಎಂದು ಶ್ರೀರಾಮುಲು ತಿಳಿಸಿದರು.
Key words: Congress, treated, respect, Former Minister, Sriramulu
The post ಕಾಂಗ್ರೆಸ್ಸಿಗರು ನನ್ನನ್ನು ಗೌರವದಿಂದ ಕಂಡಿದ್ದಾರೆ- ಮಾಜಿ ಸಚಿವ ಶ್ರೀರಾಮುಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.