ಬೆಂಗಳೂರು,ಜೂನ್,5,2025 (www.justkannada.in): ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಘಟನೆಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಆರ್.ಅಶೋಕ್, ನೂರು ಮೀಟರ್ ಅಂತರದಲ್ಲಿ ಎರಡು ಕಾರ್ಯಕ್ರಮ ಮಾಡುವ ಅಗತ್ಯವೇನಿತ್ತು? ರಾಜಕೀಯ ಪ್ರಚಾರಕ್ಕಾಗಿ ಪೊಲೀಸರ ಅನುಮತಿಯನ್ನೂ ಪಡೆಯದೆ ಕಾರ್ಯಕ್ರಮಗಳನ್ನು ನಡೆಸಿ ದುರಂತಕ್ಕೆ ಕಾರಣರಾಗಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ ಎಂದು ಹರಿಹಾಯ್ದರು
ಕಾರ್ಯಕ್ರಮಕ್ಕೆ ಪೊಲೀಸರು ನಿರಾಕರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೈಕೋರ್ಟ್ ನಿರ್ಬಂಧಿತ ವಲಯದಲ್ಲಿ ಡ್ರೋಣ್ ಬಳಕೆ ಮಾಡಿದ್ದಾರೆ. ಕೋರ್ಟ್ ಕಟ್ತಡದ ಮೇಲೆ ಕೂಡ ಹತ್ತಿದ್ದಾರೆ. ಬಿಟ್ಟವರು ಯಾರು? ತಪ್ಪನ್ನು ಬೇರೆಯವರ ಮೇಲೆ ಹಾಕಲು ನಿನ್ನೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಎಷ್ಟು ಹೊತ್ತಿಗೆ ಒಳಗೆ ಬಿಡಬೇಕು ಎಂಬ ಬಗ್ಗೆ ಯಾವುದೇ ನಿರ್ದೇಶನ ಇಲ್ಲ. ಕಾರ್ಯಕ್ರಮದ ಆಯೋಜಕರು ಯಾರೆಂದೇ ಗೊತ್ತಿಲ್ಲ ಎಂದು ಪೊಲಿಸರು ಹೇಳುತ್ತಾರೆ. ಇದೆಲ್ಲವೂ ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ನಮಗೂ ಈ ದುರಂತಕ್ಕೂ ಸಂಬಂಧವಿಲ್ಲ, ನಮ್ಮದು ತಪ್ಪಿಲ್ಲ ಎಂದು ಕೆ ಎಸ್ ಸಿಎ ಹೇಳಿದೆ. ಆಟಗಾರರನ್ನು ವಿಧಾನಸೌಧಕ್ಕೆ ಕರೆತಂದ ಪುಣ್ಯಾತ್ಮ ಯಾರು? ಅವನ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡಬೇಕಲ್ಲವೇ? ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
Key words: Stampede, Tragedy, Government, R.Ashok
The post ಕಾಲ್ತುಳಿತ ದುರಂತ ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ: ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.