ಮೈಸೂರು,ಫೆಬ್ರವರಿ,21,2025 (www.justkannada.in): ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರೇ ಹೆಚ್ಚೆಚ್ಚು ಪ್ರಯಾಣ ಮಾಡುತ್ತಿದ್ದು ಪುರುಷರ ಮೀಸಲು ಆಸನದಲ್ಲೂ ಕೂರುತ್ತಿದ್ದರು. ಕಾಸುಕೊಟ್ಟು ಪ್ರಯಾಣಿಸುತ್ತಿದ್ದರೂ ಸಹ ಪುರುಷರು ಇದರಿಂದ ತೊಂದರೆಗೊಳಗಾಗುತ್ತಿದ್ದರು. ಇದೀಗ ಕೊನೆಗೂ ಗಂಡು ಮಕ್ಕಳ ಕಷ್ಟ ಅರ್ಥ ಮಾಡಿಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ನಗರ ವಿಭಾಗ ಮಹತ್ವದ ಕ್ರಮವೊಂದನ್ನ ತೆಗೆದುಕೊಂಡಿದೆ.
ಹೌದು, ಇನ್ಮುಂದೆ ಪುರುಷರು ಕೂರುವ ಆಸನದಲ್ಲಿ ಗಂಡಸರೇ ಕೂರಬೇಕು. ಈ ಕುರಿತು ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡಿ. ಕ್ರಮದ ಬಳಿಕ ಅನುಸರಿಸುತ್ತಿರುವ ವಿವರದ ಬಗ್ಗೆ ಮಾಹಿತಿ ನೀಡಿ. ಪುರುಷರ ಆಸನದಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಿದ್ದಾರೆ. ಪುರುಷರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ. ಪುರುಷರ ಆಸನದಲ್ಲಿ ಪುರುಷರೇ ಕೂರುವಂತೆ ನೋಡಿಕೊಳ್ಳಿ ಎಂದು ಕ.ರಾ.ರ.ಸಾ. ನಿಗಮ ಮೈಸೂರು ನಗರ ವಿಭಾಗ ಸೂಚನೆ ನೀಡಿದೆ .
ಎಸ್.ವಿಷ್ಣುವರ್ಧನ್ ಅವರಿಂದ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದ್ದು, ರಾಜ್ಯದ ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಈ ಆದೇಶವನ್ನ ಹಿರಿಯ ಅಧಿಕಾರಿಗಳು ರವಾನೆ ಮಾಡಿದ್ದಾರೆ.
Key words: KSRTC , Men, Government bus, Seated, Mysore
The post ಕೊನೆಗೂ ಗಂಡು ಮಕ್ಕಳ ಕಷ್ಟ ಅರ್ಥ ಮಾಡಿಕೊಂಡು ದಿಟ್ಟ ಕ್ರಮ ಕೈಗೊಂಡ KSRTC appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.