ತುಮಕೂರು,ಮಾರ್ಚ್,3,2025 (www.justkannada.in): ಕೊರಟಗೆರೆ ಪಟ್ಟಣದಲ್ಲಿ ಕನ್ನಡ ಧ್ವಜ ಸ್ತಂಭ ತೆರವು ಪ್ರಕರಣ ಸಂಬಂಧ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರವಾಗಿರುವ ಕೊರಟಗೆರೆಯಲ್ಲಿ 2022 ನವೆಂಬರ್ 2 ರಂದು ಕನ್ನಡ ಧ್ವಜ ಸ್ತಂಭವನ್ನ ನಿರ್ಮಿಸಲಾಗಿತ್ತು. ಕೊರಟಗೆರೆ ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪಡೆದು ಕನ್ನಡ ಧ್ವಜ ನಿರ್ಮಾಣ ಮಾಡಲಾಗಿತ್ತು. ವಾಹನ ಸಂಚಾರಕ್ಕೆ ಅಡಚಣೆ ಆಗುತ್ತೆ ಎಂದು ಕನ್ನಡ ಧ್ವಜ ಸ್ತಂಭ ತೆರವು ಮಾಡಲಾಗಿತ್ತು. ಕೊರಟಗೆರೆ ತಹಶಿಲ್ದಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ತೆರವುಗೊಳಿಸಲಾಗಿತ್ತು.
ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಕೊರಟಗೆರೆಯಲ್ಲಿ ಧ್ವಜಸ್ತಂಭ ತೆರವುಗೊಳಿಸಿ ಕನ್ನಡದ ಕುಲಕೋಟಿಗೆ ಅವಮಾನ ಮಾಡಲಾಗಿದೆ. ಕೊರಟಗೆರೆ ಅಪಟ್ಟ ಕನ್ನಡಿಗರ ಊರುಇಂಥ ಊರಲ್ಲಿ ಕನ್ನಡ ಬಾವುಟ ಕಿತ್ತುಹಾಕಿದ್ದಾರೆ. ನಾಡ ದ್ರೋಹಿ ಮರಾಠಿಗರಿಗೂ ನಿಮಗೂ ಏನು ವ್ಯತ್ಯಾಸ. ಮತ್ತೇ ಕೊರಟಗೆರೆಯಲ್ಲಿ ಸ್ತಂಭವನ್ನು ಸ್ಥಾಪನೆ ಮಾಡಬೇಕು ಎಂದರು.
ಮಾರ್ಚ ೨೨ ರ ಬಂದ್ ವಿಚಾರ. ಕೆಪಿಸಿಸಿ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗಿದೆ,ಅವರ ಜೊತೆ ನಾನು ಇರಬೇಕಾಗಿದೆ. ಆ ಬಂದ್ ಗೆ ನನ್ನ ಬೆಂಬಲ ಇಲ್ಲ. ಎಲ್ಲದಕ್ಕೂ ಬಂದೇ ಅಸ್ತ್ರ ಆಗಬಾರದು. ಕೊನೆಯ ಬ್ರಹ್ಮಾಸ್ತ್ರ ಬಂದ್ ಆಗಬೇಕು ಎಂದರು.
Key words: Koratagere, Kannada culture, Karave, Narayana Gowda
The post ಕೊರಟಗೆರೆಯಲ್ಲಿ ಧ್ವಜಸ್ತಂಭ ತೆರವುಗೊಳಿಸಿ ಕನ್ನಡದ ಕುಲಕೋಟಿಗೆ ಅವಮಾನ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.